Skip to main content

Posts

ಅಂದು ಮತ್ತು ಇಂದು .

ಒಂದು ವರ್ಷ ಆಯ್ತು ಮನೆಯಿಂದ ದೂರ  ಇದ್ದು. ಒಂದು ವರ್ಷದೊಳಗೆ ಹಲವಾರು ರೀತಿಯ ಜನರನ್ನು ಭೇಟಿಯಾದರೂ , ಬೇರೆ ಬೇರೆ ಸಂಸ್ಕೃತಿಯ ಪರಿಚಯವಾದರೂ ನಾವು ಹುಟ್ಟಿ ಬೆಳೆದ  ಊರಿನ  ಬದುಕಿನ ಶೈಲಿ, ಅಲ್ಲಿನ ಸಂಸ್ಕೃತಿಯೇ ನಮಗೆ ಶ್ರೇಷ್ಠವೆನಿಸುತ್ತದೆ. ಮನೆಯಲ್ಲಿ ಇರ್ಬೇಕಿದ್ರೆ ಅಮ್ಮ ಉಪ್ಪಿಟ್ಟು ಮಾಡಿದರೆ ಅಯ್ಯೋ ಉಪ್ಪಿಟ್ಟಾ ಎಂದು, ದೋಸೆ ಮಾಡಿದರೆ ದಿನಾಲು ದೋಸೆ ಯಾಕಮ್ಮ ನಿನ್ನೆ  ತಾನೇ ಮಾಡಿದ್ರಿ ಎಂದು ಅಮ್ಮನ ಮೇಲೆ ರೇಗಿಬಿಡುವುದು ರೂಢಿಯಾಗಿತ್ತು. ಸೌತೆಕಾಯಿ ಪಲ್ಯವಾದರೆ ಹಸಿವಿಲ್ಲ ಎಂದು ಹಸಿವಲ್ಲೇ ಮಲಗಿಬಿಡುವುದೂ ಇತ್ತು. ಆದರೆ ಇಂದು ಬೆಳಗ್ಗಿನಿಂದ ರಾತ್ರಿಯವರೆಗೂ ಮೂರುಹೊತ್ತೂ ರೋಟಿ-ದಾಲ್ ತಿಂದರೂ ಬೇಸರವಿಲ್ಲ. ಬೇಸರವಿಲ್ಲ ಎನ್ನುವುದಕ್ಕಿಂತ ಅದಕ್ಕೆ ಒಗ್ಗಿಕೊಂಡುಬಿಟ್ಟಿದೇನೆ ಎಂದರೆ ಸರಿಯಾದೀತು. ಈಗ ಮನೆಗೆ ಹೋದರೆ ಅಮ್ಮ ಗಂಜಿ ಊಟ ಬಡಿಸಿದರೂ ಹಬ್ಬದೂಟ ತಿಂದಷ್ಟು ತೃಪ್ತಿ. ಏಳಲು ಅಲಾರ್ಮ್ ಬೇಕಿರಲಿಲ್ಲ, ಹಕ್ಕಿಗಳ ಇಂಚರಕ್ಕೆ ಅಮ್ಮ ಎದ್ದರೆ, ಅಮ್ಮನ ಧ್ವನಿಗೆ ಮಕ್ಕಳೆಲ್ಲಾ ಎದ್ದು ಬಿಡುತಿದ್ವಿ. ಎದ್ದು ಹೋಗಿ ಮನೆ ಹೊರಗೆ ಜಗಲಿಯಲ್ಲಿ ಕೂತು ಸೂರ್ಯೋದಯ, ಗದ್ದೆಯಲ್ಲಿ ಭತ್ತದ ತೆನೆ, ಅಂಗಳದಲ್ಲಿ ಅರಳಿ ನಿಂತ ಹೂವು, ಗದ್ದೆಯ ಬದಿಯಿಂದ ಸಾಲಾಗಿ ಹೋಗುತ್ತಿರುವ ನವಿಲುಗಳನ್ನು ನೋಡ್ಕೊಂಡು  ಕುಳಿತುಕೊಳ್ಳುವದು ದಿನಚರಿ. ಹಾಗೆ ಕುಳಿತುಕೊಂಡರೆ ಮತ್ತೆ ಏಳುವುದು 'ಕಾಲೇಜಿಗೆ ನಂಗೆ ಹೋಗ್ಲಿಕ್ಕಾ  ಅಲ್ಲ...

ಕಲೆ !

ಏನಮ್ಮ ನೀವು ಇಡೀ ದಿವಸ ಯಕ್ಷಗಾನ ಅಂದ್ಕೊಂಡು, ರಿಮೋಟ್ ಕೊಡಿ ಎಂದು ಟಿವಿ ರಿಮೋಟ್ ಅಮ್ಮನಿಂದ ತಗೊಂಡು ಕಲರ್ಸ್ ಅಲ್ಲಿ ಬರುವ ಬಿಗ್ ಬಾಸ್ ಕಾರ್ಯಕ್ರಮ ನೋಡ್ಕೊಂಡು ಕುಳಿತೆ. ಇಂದಿನ ಮಕ್ಕಳಿಗೆ ನಮ್ಮ ಕಲೆ ಸಂಸ್ಕೃತಿ ಏನು ಬೇಕಿಲ್ಲ ಎಂದು ಗೊಣಗುತ್ತ ಅಡಿಗೆ ಕೋಣೆಯೊಳಗೆ ಸೇರಿಬಿಟ್ಟರು ಅಮ್ಮ . ಇದು ಒಂದು ವರ್ಷದ ಹಿಂದಿನ ಮಾತು. ಇಂದು ಪರ ಊರಲ್ಲಿ ಇದ್ದುಕೊಂಡು  ತುಳು , ಕನ್ನಡ ಮಾತಾಡುವವರು ಸಿಕ್ಕಿದರೆ, ನಮ್ಮೂರಿನವರು ಎಂದು ಮಂಗಳೂರಿನ ಬಗ್ಗೆ ಮಾತಾಡಲು ಶುರುಮಾಡ್ತೀವಿ. ಯಕ್ಷಗಾನದ ಬಗ್ಗೆ ನಮಗೆ ಗೊತ್ತಿರುವುದು ಚೆಂಡೆಯ ಸದ್ದು, ಮುಖಕ್ಕೆ ಒಂದಷ್ಟು ಬಣ್ಣ ಬಳಿದುಕೊಂಡು ಇಡೀ ರಾತ್ರಿ ನಲಿಯುವ ಒಂದು ಕಲೆ ಎಂಬುದಷ್ಟು ಬಿಟ್ಟು ಸುಮಾರು ಮಂದಿಗೆ  ಅದ್ರ ಬಗ್ಗೆ ಸಾಸಿವೆ ಕಾಳಷ್ಟು ಗೊತ್ತಿಲ್ಲ ಎಂಬುದು ಕಹಿ ಸತ್ಯ. ಇತೀಚೆಗಷ್ಟೇ 'ಪಿಲಿಬೈಲ್ ಯಮುನಕ್ಕ' ಎಂಬ ಸಿನಿಮಾ ಬಿಡಿಗಡೆ ಯಾಗಿತ್ತು. 'ಮಾಯಕದೊಂಜಿ ಪೊನ್ನ ಗಾಳಿ ಬೀಜಿಂದ್ ಗೆ ' ಎಂದು ಪಟ್ಲಾ ಸತೀಶ್ ಶೆಟ್ಟಿ  ಯವರು ಹಾಡಿದ್ದಾರೆ.  ಈ ಹಾಡಿನಿಂದಾಗಿ ಪಟ್ಲಾ ಸತೀಶ್ ಶೆಟ್ಟಿ ಯವರು ಮಂಗಳೂರಿನ ಯುವ  ಜನತೆಯಲ್ಲಿ ಮನೆ ಮಾತಾದರು . ಯಕ್ಷಗಾನ ಕಲೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಈ ದಿಗ್ಗಜನ ಪರಿಚಯ ಸಿನಿಮಾ ದ ಮೂಲಕ ಯುವಜನತೆಯ  ಕಣ್ಣೆದುರಿಗೆ ಬಂತು. ಹೀಗೆ ಯೂಟ್ಯುಬ್ಗ್ ಅಲ್ಲಿ ಅವರ ಈ ಹಾಡುಗಳನ್ನು ಕೇಳುತಿರಬೇಕಿದ್ರೆ ಮೂಡಬಿದ್ರೆಯ  'ಯಕ್...

ಜೀವನ ಎಂಬ ಈ ಪ್ರಯಾಣದಲ್ಲಿ ಸಾಗುತ್ತಿದ್ದಂತೆ ...!

ದೀಪಾವಳಿಯ ರಜೆ ಮುಗಿಯಿತು, ಮನಸ್ಸು ಒಪ್ಪದಿದ್ದರು ಮನೆಯಿಂದ ಹೊರಡಲೇ ಬೇಕು. ಇತ್ತೀಚೆಗಷ್ಟೇ ಕಾಲೇಜು ಮುಗಿಸಿ ಕೆಲಸದ ನಿಮಿತ್ತ ಮೈಸೂರಲ್ಲಿ ಟ್ರೈನಿಂಗ್ ಮುಗಿಸಿಕೊಂಡು  ಹೈದೆರಾಬಾದಿಗೆ ಟ್ರಾನ್ಸ್ಫರ್ ಆಗಿತ್ತು. ಕಾಲೇಜಲ್ಲಿ ಇರಬೇಕಿದ್ದರೆ ಮನೆಯಿಂದ ದೂರ ಇರಬೇಕು, ಬ್ಯಾಚುಲರ್ ಲೈಫ್ ಅಂದರೆ ಏನೆಂಬುದು ಅನುಭವಿಸಬೇಕೆಂಬ ಕಾತುರ. ಆದರೆ  ಈಗ ಮನೆಗೆ ಹೊರಡಲು ತುದಿಗಾಲಲ್ಲಿ ನಿಲ್ಲುತ್ತೇವೆ, ರಜೆ ಮುಗಿಸಿಕೊಂಡು ಮನೆಯಿಂದ ಹಿಂದೆ ಹೊರಡಬೇಕಿದ್ದರೆ  ಮನಸ್ಸು ಭಾರವಾಗುತ್ತದೆ. ಮನೆಯಿಂದ ಸುಮಾರು ಮೂರು ಗಂಟೆಗೆ ಬಸ್ಸು ಹತ್ತಿದ್ದೆ. ಪ್ರಯಾಣಿಸುವಾಗ ಕಿಟಕಿ ಬದಿಯಲ್ಲಿ ಕೂರುವುದಂದ್ರೆ  ಅದೇನೋ  ನನಗೆ ಚಿಕ್ಕಂದಿನಿಂದ ಇಷ್ಟವಾಗಿತ್ತು. ಶಾಲೆಗೆ ಬಸ್ಸಲ್ಲಿ ಹೊರಡಬೇಕಿದ್ದರೆ ಕಿಟಕಿ ಬದಿಯಲ್ಲಿ  ಕೂರಲು ಅಣ್ಣನೊಡನೆ ಜಗಳವಾಡುವುದು ರೂಢಿಯಾಗಿತ್ತು. ನನ್ನ ಸೀಟ್ ಹುಡುಕುತ್ತ ಹೋಗಿ ನೋಡಿದರೆ ಅಲ್ಲಿ ಒಬ್ಬಳು, ಕಿವಿಗೆ  ಇಯರ್ ಫೋನ್  ಸಿಕ್ಕಿಸಿಕೊಂಡು ಅವಳ  ಲೋಕದಲ್ಲೇ ಮಗ್ನಳಾಗಿ ಕೂತಿದ್ದಳು. ಕಿಟಿಕಿ ಬದಿ ಕೂರಬೇಕೆಂದರೆ ಈಗಲೂ ನನ್ನೊಳಗಿರುವ ಆ ಹಠಾತ್ತಾದ ಪುಟ್ಟ ಹುಡುಗಿ ಎದ್ದು ಬಿಡುತ್ತಾಳೆ. ಅಲ್ಲಿ ಕೂತಿದ್ದವಳು ...

ಕಾಡು ನಾಡಾದರೆ....!!!!!

                                ನವಿಲೊಂದು ನಿಂತಿತ್ತು ಇಂದು ಎನ್ನ ಮುಂದೆ , ಅದನ್ನ ನೋಡಿ ಎನ್ನ ಮನ ಅತ್ತಿತು ! ಕಾಲವೊಂದಿತ್ತು ನಾ ನವಿಲ ಕಂಡರೆ ಜಿಗಿಯುತಿದ್ದೆ ಆ ಹರುಷ ಇಂದು ಎನ್ನಲ್ಲಿ ಮರೆಯಾಗಿತ್ತು ! ಎರಡು ಮೈಲು ದೂರದಲ್ಲಿದ್ದ ಮಯೂರನ  ಕಂಡರೆ ಕಣ್ಣಿಗೆ ಹಬ್ಬ ! ಇಂದು ಎರಡು ಹೆಜ್ಜೆ ದೂರವಿದ್ದರು,  ನೋಡಲು ಒಲ್ಲೆ ಎಂದೆ ! ಮುಂಗಾರು ಮಳೆಗೆ ಗರಿಬಿಚ್ಚಿ , ನಲಿಯಬೇಕಿದ್ದ ನವಿಲು, ಇಂದು ಗರಿಯ ಮುದುರಿಕೊಂಡು , ಅತ್ತ ಇತ್ತ ನೋಡುತ್ತಿತ್ತು ! ಕಾಡು ನಾಡಾಗಿ ಮಾರ್ಪಾಡಾಗಿತ್ತು, ತನ್ನ ಕಾಡ ಬಿಟ್ಟು , ನಾಡಿಗೆ ಬಂದ ನವಿಲು ಇಂದು , ಅನಾಥವಾಗಿತ್ತು !!!

ಅವಳು !

ಅಂತರ್ಜಾಲ, ಆಧುನಿಕತೆ ಎಂಬ ಮಾಯಾಲೋಕದಲ್ಲಿ  ಸಿಲುಕಿದ್ದ ಅವಳು,ಕಾಲಚಕ್ರ ಉರುಳುತಿದ್ದಂತೆ  ತನ್ನನು ತಾನು ಮರೆತಿದ್ದಳು ! ಮೂಕಪ್ರೇಕ್ಷಕಿಯಾದಳು !  ಹೀಗೆ ಒಂದು ದಿನ , ತನ್ನ ಬಾಲ್ಯ ವನ್ನು ನೆನಪಿಸಿಕೊಳುತಿದ್ದ ಅವಳಿಗೆ,  ತಾನು ಏನೋ ಕಳೆದು ಕೊಂಡಿದ್ದೆನೆಂದು ಅರಿವಾಯಿತು ! ಅದು ಏನೆಂಬುದು ಗೊತ್ತಾದಂತೆ ,  ಪೆನ್ನು ಪೇಪರ್ ತೆಗೆದು ಬರೆಯಲು ಶುರು ಮಾಡಿಯೇಬಿಟ್ಟಳು !