Skip to main content

ಜೀವನ ಎಂಬ ಈ ಪ್ರಯಾಣದಲ್ಲಿ ಸಾಗುತ್ತಿದ್ದಂತೆ ...!



ದೀಪಾವಳಿಯ ರಜೆ ಮುಗಿಯಿತು, ಮನಸ್ಸು ಒಪ್ಪದಿದ್ದರು ಮನೆಯಿಂದ ಹೊರಡಲೇ ಬೇಕು. ಇತ್ತೀಚೆಗಷ್ಟೇ ಕಾಲೇಜು ಮುಗಿಸಿ ಕೆಲಸದ ನಿಮಿತ್ತ ಮೈಸೂರಲ್ಲಿ ಟ್ರೈನಿಂಗ್ ಮುಗಿಸಿಕೊಂಡು  ಹೈದೆರಾಬಾದಿಗೆ ಟ್ರಾನ್ಸ್ಫರ್ ಆಗಿತ್ತು. ಕಾಲೇಜಲ್ಲಿ ಇರಬೇಕಿದ್ದರೆ ಮನೆಯಿಂದ ದೂರ ಇರಬೇಕು, ಬ್ಯಾಚುಲರ್ ಲೈಫ್ ಅಂದರೆ ಏನೆಂಬುದು ಅನುಭವಿಸಬೇಕೆಂಬ ಕಾತುರ. ಆದರೆ  ಈಗ ಮನೆಗೆ ಹೊರಡಲು ತುದಿಗಾಲಲ್ಲಿ ನಿಲ್ಲುತ್ತೇವೆ, ರಜೆ ಮುಗಿಸಿಕೊಂಡು ಮನೆಯಿಂದ ಹಿಂದೆ ಹೊರಡಬೇಕಿದ್ದರೆ ಮನಸ್ಸು ಭಾರವಾಗುತ್ತದೆ. ಮನೆಯಿಂದ ಸುಮಾರು ಮೂರು ಗಂಟೆಗೆ ಬಸ್ಸು ಹತ್ತಿದ್ದೆ. ಪ್ರಯಾಣಿಸುವಾಗ ಕಿಟಕಿ ಬದಿಯಲ್ಲಿ ಕೂರುವುದಂದ್ರೆ  ಅದೇನೋ 
ನನಗೆ ಚಿಕ್ಕಂದಿನಿಂದ ಇಷ್ಟವಾಗಿತ್ತು. ಶಾಲೆಗೆ ಬಸ್ಸಲ್ಲಿ ಹೊರಡಬೇಕಿದ್ದರೆ ಕಿಟಕಿ ಬದಿಯಲ್ಲಿ  ಕೂರಲು ಅಣ್ಣನೊಡನೆ ಜಗಳವಾಡುವುದು ರೂಢಿಯಾಗಿತ್ತು.

ನನ್ನ ಸೀಟ್ ಹುಡುಕುತ್ತ ಹೋಗಿ ನೋಡಿದರೆ ಅಲ್ಲಿ ಒಬ್ಬಳು, ಕಿವಿಗೆ ಇಯರ್ ಫೋನ್  ಸಿಕ್ಕಿಸಿಕೊಂಡು ಅವಳ  ಲೋಕದಲ್ಲೇ ಮಗ್ನಳಾಗಿ ಕೂತಿದ್ದಳು. ಕಿಟಿಕಿ ಬದಿ ಕೂರಬೇಕೆಂದರೆ ಈಗಲೂ ನನ್ನೊಳಗಿರುವ ಆ ಹಠಾತ್ತಾದ ಪುಟ್ಟ ಹುಡುಗಿ ಎದ್ದು ಬಿಡುತ್ತಾಳೆ. ಅಲ್ಲಿ ಕೂತಿದ್ದವಳು ನನ್ನನ್ನು ನೋಡಿ ಪಕ್ಕಕ್ಕೆ ಸರಿದಳು. ನನ್ನೊಳಗಿರುವ  ಆ  ಪುಟ್ಟ  ಹುಡುಗಿ  ನಲಿಯುತಿದ್ದಳು  ಖುಷಿಯಿಂದ. ಬಸ್ ಹೊತ್ತಿಗಿಂತ ಬೇಗನೆ ಬಂದಿದ್ದರಿಂದ ಅಲ್ಲೇ ನಿಂತಿತ್ತು . ಬಸ್ ಹೊರಡಬೇಕಿದ್ದರೆ ನನ್ ಕಾಲೇಜ್ ಬ್ಯಾಚ್ ಮೇಟ್ ಒಬ್ಬ ಬಸ್ ಹತ್ತಿದ. ಅವ್ನು 
ಹೈದೆರಾಬಾದಿಗೆಂದು  ಹೊರಟಿದ್ದ. ನಾಲ್ಕು ವರ್ಷ ದಿನಾಲು ಒಂದೇ ಬಸ್ಟಾಪ್ ಅಲ್ಲಿ ಕಾಲೇಜ್ ಗೆ ಹೊರಡುವಾಗ ನಿಂತಿದ್ದರೂ ನಾವು ಮಾತಾಡಿದ್ದು ತುಂಬಾ ಕಮ್ಮಿ.ಭಾರತೀಯರು ಹೊರದೇಶದಲ್ಲಿ ಸಿಕ್ಕಿದ್ದರೆ ಹೇಗೆ ಉತ್ತರ ಭಾರತದವನೇ ದಕ್ಷಿಣ ಭಾರತದವನೇ ಎಂದು ಪರಿಗಣಿಸದೆ ಒಗ್ಗಟ್ಟಾಗಿರುತ್ತಾರೋ ಹಾಗೆ ನಾವು ಹೈದೆರಾಬಾದ್ ಅಲ್ಲಿ ಒಮ್ಮೆ ಯಾವ ಬ್ರಾಂಚ್ ಎಂದು ಪರಿಗಣಿಸದೆ  ನಮ್ಮ ಕಾಲೇಜುನವರೆಂದು ವಾರಾಂತ್ಯದಲ್ಲಿ ಒಮ್ಮೆ ಕೆಲವರು ಒಟ್ಟಾಗಿದ್ವಿ. ಅವನೋ  ಮಾತಿಗಿಳಿದರೆ ಎಷ್ಟು  ಬೇಕೋ  ಅದಕ್ಕ್ಕಿಂತ ಜಾಸ್ತಿಯೇ  ಮಾತಾಡುವವನು. ತನ್ನ ಮಾತಿನ ಮೋಡಿಯಲ್ಲೇ ಯಾರನ್ನೂ ಮರಳು ಮಾಡಿಸುವವನು.  ಹೇಗೂ  ಒಬ್ಳೆ  ಹೊರಟಿದ್ದೆ ,ಜೊತೆಗೆ  ಒಬ್ರು  ಇದ್ದಾರೆ ಎಂದು  ಧೈರ್ಯ  ಬಂತು.

ಹೀಗೆ  ನಾವು ಮಾತಾಡಬೇಕಿದ್ದರೆ  ನನ್ನ  ಬದಿ  ಕೂತಿದ್ದ  ಹುಡುಗಿ ಮಾತಿಗಿಳಿದಳು. ಅವಳೇ ಶಿವಾನಿ, ಅವಳು  ಮಂಗಳೂರಿನ  ಒಂದು  ಕಾಲೇಜಲ್ಲಿ ಇಂಜಿನಿಯರಿಂಗ್  ಮುಗಿಸಿ  ಈಗ ಉನ್ನತ  ಶಿಕ್ಷಣವನ್ನು  ಪಡೆಯುತಿದ್ದಳು. ಇಂಜಿನಿಯರಿಂಗ್ ಮುಗಿಸಿದ ಕೂಡಲೇ  ಮುಂದೆ ಏನು ಎಂದು ಕೇಳಿದರೆ ಕೆಲವರು ಎರಡು ವರ್ಷ ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಮತ್ತೆ ಎಂಬಿಎ ಅಥವಾ ಎಂಟೆಕ್ ಎಂದು ಹೇಳಿದರೆ, ಇನ್ನು ಕೆಲವರು ಎಂಎಸ್ ಗೆಂದು ಹೊರದೇಶಕ್ಕೆ ಹೊರಡುತ್ತಾರೆ. ನೂರರಲ್ಲಿ ಹತ್ತೋ ಹನ್ನೆರಡು ಮಂದಿಯೇನೋ ನೇವಿ ಗೋ ಆರ್ಮಿ ಗೋ ಇಲ್ವೇ ಐಎಎಸ್ ಆಫೀಸರ್ ಆಗ್ಬೇಕೆನ್ನುತ್ತಾರೆ.

ಅವಳ ಬಗ್ಗೆ ಜಾಸ್ತಿ ತಿಳಿಯಬೇಕೆಂಬ ಆಸಕ್ತಿ ನನ್ನಲ್ಲಿ ಮೂಡಿದ್ದು  ಅವಳ ಉನ್ನತ ಶಿಕ್ಷಣಕ್ಕೆಂದು ಅವಳು  ಆಯ್ದ ಕೋರ್ಸಿನಿಂದಾಗಿ.  ಮಾಸ್  ಮೀಡಿಯಾ  ಅವಳ ವಿಷಯವಾಗಿತ್ತು. ನಾನು  ಅಷ್ಟು  ಮಾತಾಡುವವಳಲ್ಲ  ಆದ್ರೆ   ಮಾತಾಡುವವರನ್ನ  ಕಂಡರೆ ಅವರೊಡನೆ  ಸಮಯ  ಕಳೆಯುವುದಂದ್ರೆ  ಒಂದು  ಹೆಜ್ಜೆ  ಮುಂದೇನೇ  ಇರುವವಳು. ಅರ್ಧ  ಗಂಟೆಯಲ್ಲಿ  ನಾವು  ಮೂವರು  ಬಾಲ್ಯದಿಂದ  ಪರಿಚಯ ಇರುವವರಂತೆ ಮಾತಾಡಲು  ಶುರು  ಮಾಡಿದ್ವಿ . ಬಸ್ಸಲ್ಲಿ  ಹೆಚ್ಚೆಂದ್ರೆ  ಹತ್ತು  ಹದಿನಯ್ದು  ಮಂದಿ  ಇದ್ದದರಿಂದ ನಮ್ಮ್  ಗಲಾಟಿಯೇ  ಇಡೀ  ಬಸ್ಸಲ್ಲಿ  ಕೇಳುತಿತ್ತು.

ಸ್ವಲ್ಪ ಹೊತ್ತಾದ ನಂತರ ನಾನು ಮತ್ತೆ ಶಿವಾನಿ ಮಾತಾಡ್ತಿದ್ವಿ. ನನ್ನ ನಾಲ್ಕು ತಿಂಗಳು ಮೈಸೂರಿನ ಟ್ರೈನಿಂಗ್ ಬಗ್ಗೆ,ಹೈದೆರಾಬಾದಿನಲ್ಲಿ ನನ್ನ ಅನುಭವದ ಬಗ್ಗೆ ತಿಳಿದುಕೊಳ್ಳಲು  ಅವಳು ಆಸಕ್ತಳಾಗಿದ್ದರೆ ಅವಳ ವಿಷಯದ ಆಯ್ಕೆಯ ಬಗ್ಗೆ ನಾನು ಕುತೂಹಲದಿಂದ ಪ್ರಶ್ನಿಸುತ್ತಿದ್ದೆ. ಚಿಕ್ಕಂದಿನಿಂದ ತಾನು ಪತ್ರಕರ್ತೆ ಯಾಗಬೇಕೆಂಬ ಕನಸಿನ ಗೋಪುರ ಕಟ್ಟಿದ್ದಳು. ಆದ್ರೆ ಪಿಯುಸಿ ಯಲ್ಲಿ ವಿಜ್ಞಾನ ಕಲಿತ ನಂತರ ಸುಮಾರು  ಮಂದಿಯ ಹೆತ್ತವರ ಹಾಗೆ ಅವಳ ಹೆತ್ತವರು ಕೂಡ ತಮ್ಮ ಮಗಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂದು
ಇಂಜಿನಿಯರಿಂಗ್ ಗೆ ಸೇರಿಸಿದ್ದರು. ಆದ್ರೆ ಅದು ಅವಳಿಗೆ ಕಬ್ಬಿಣದ ಕಡಲೆಯಾಗಿತ್ತು. ಹೇಗೋ ನಾಲ್ಕು ವರ್ಷ ಮುಗಿಸಿ ತನ್ನ ಇಷ್ಟದ ಪ್ರಕಾರ ಉನ್ನತ ಶಿಕ್ಷಣಕ್ಕಾಗಿ ಸೇರಿದ್ದಳು.

ಚಿಕ್ಕಂದಿನಿಂದ ಪುಸ್ತಕಗಳೊಟ್ಟಿಗೆ ಸ್ವಲ್ಪ ಜಾಸ್ತಿಯೇ ಹೊತ್ತು ಕಳೆಯುತಿದ್ದವಳು ನಾನು. ಅವಳ
ಹವ್ಯಾಸಗಳಲ್ಲೊಂದು ಓದುವುದಾಗಿದ್ದರಿಂದ ಲೇಖಕರ ಬಗ್ಗೆ, ನಾವು ಓದಿದ ಪುಸ್ತಕಗಳ ಬಗ್ಗೆ  ಮಾತಾಡಲು ಶುರು ಮಾಡಿದ್ವಿ .ಮಾತಾಡುತ್ತ ಮಾತಾಡುತ್ತ ನಮಗೆ  ಹೊತ್ತು ಕಳೆದದ್ದೇ ಗೊತ್ತಾಗಿರಲಿಲ್ಲ  ಅವಳು ಹುಬ್ಬಳಿ ಗೆಂದು ಹೊರಡಿದ್ದಳು. ಹುಬ್ಬಳಿ ಬಂತೆಂದ ಕೂಡಲೇ ಇನ್ನೊಮ್ಮೆ ನಂಗೆ ಬೇಜಾರಾಗಿತ್ತು. ಏಳು  ಗಂಟೆಯಲ್ಲೇ  ನಾವು ಆಪ್ತರಾಗಿ ಬಿಟ್ಟಿದ್ವಿ. 
ಆದ್ರೆ ಆಧುನಿಕ ತಂತ್ರಜ್ಞಾನದ ಕಾರಣದಿಂದಾಗಿ ಇಂದಿಗೂ ನಮ್ಮ ಮಾತು ನಿಲ್ಲಲೇ ಇಲ್ಲ.

ಅವಳು  ಇಳಿದ ಕೂಡಲೇ ಇನ್ನೊಬ್ಬಳು ಬಂದು ನನ್ನ ಪಕ್ಕದಲ್ಲಿ ಕೂತಳು. ಅವಳು ಹುಬ್ಬಳ್ಳಿ ಯಿಂದ ಹೈದೆರಾಬಾದಿಗೆಂದು ಹೊರಡಿದ್ದಳು. ನಾನು ಇನ್ನು ಶಿವಾನಿ ಬಗ್ಗೆ
ಯೋಚನೆಯಲ್ಲಿದ್ದರೆ, ನನ್ನ ಬದಿ ಇದ್ದವಳು ಮಾತಿಗಿಳಿದಳು. ಒಬ್ಬರಿನ್ನೊಬರ ಪರಿಚಯ ಮಾಡ್ಕೊಂಡ್ವಿ. ಇವಳು ಬಿಸಿಎ ಮುಗಿಸಿ ಎಂಬಿಎ ಮಾಡಿದ್ದಳು. ಎಂಎಸ್ ಗೆ  ಕೆಲವೇ ತಿಂಗಳಲ್ಲಿ ಸೇರುವವಳಾಗಿದ್ದಳು. ಬಿಸಿಎ  ಮಾಡಿದ್ದರಿಂದ  ಎಂಎಸ್ ಗೆ ಪ್ರವೇಶಕೊಸ್ಕರ
ಇನ್ನೊಂದು ಕಂಪ್ಯೂಟರ್ ಸರ್ಟಿಫಿಕೇಷನ್ ಕೋರ್ಸ್ ಮಾಡುತಿದ್ದಳು. ಎಂಎಸ್ ಯಾವ ವಿಷಯದಲ್ಲಿ ಮಾಡಲು ಎಣಿಸುತ್ತಿದೀರ ಎಂದು ಕೇಳಿದರೆ ಅವಳ ಉತ್ತರ ಕೇಳಿ ಆಶ್ಚರ್ಯ ಚಕಿತಳಾಗಿದ್ದೆ. ಅವಳ ಮದುವೆ ನಿಶ್ಚಯವಾಗಿತ್ತು. ಗಂಡು ಯುಎಸ್ಏ ಯಲ್ಲಿ
ಇರುವುದರಿಂದ ಅವನಷ್ಟೇ ಶಿಕ್ಷಣ ಹೊಂದಿರಬೇಕೆಂದು ಎಂಎಸ್ ಗೆ ಸೇರುವುದಾಗಿಯೂ, ಯಾವ ವಿಷಯವು ಆದರೂ ಸರಿ ಡಿಗ್ರಿ ಒಂದಿದ್ದರೆ ಸಾಕು ಎಂದಳು. ಓದುವುದು, ಆ ನಂತರ ಒಂಬತ್ತು ಹತ್ತು ಗಂಟೆ ಕೆಲಸ ಮಾಡಲು ನನ್ನಿಂದ  ಆಗದು ಎಂದಿದ್ದಳು.

ಮತ್ತೆ ಅಷ್ಟೇನೂ ಮಾತಾಡಲು ಇಲ್ಲದಿದ್ದರಿಂದ, ಮರುದಿನ ಆಫೀಸಿಗೆ ಹೋಗ್ಬೇಕಾದಿದ್ದರಿಂದ ನಾನು ಮಲಗಿದೆ. ಆದ್ರೆ ನಿದ್ದೆ ಹತ್ತಲಿಲ್ಲ. ಹದಿನೈದು ಗಂಟೆಯ ಪ್ರಯಾಣದಲ್ಲಿ ಎರಡು ತರದ ವ್ಯಕ್ತಿಗಳ ಪರಿಚಯವಾಗಿತ್ತು. ಎರಡನೆಯವಳ ಹೆಸರು ಎರಡೇ ದಿನದಲ್ಲಿ ಮರೆತು ಹೋದರೆ ಮೊದಲನೆಯವಳೊಡನೆ ಇನ್ನು ಮಾತು  ಮುಗಿಯಲಿಲ್ಲ. ಒಬ್ಬಳು ಕನಸಿನ ಗೋಪುರವನ್ನು ಒಡೆಯದಂತೆ ನಿಲ್ಲಿಸಲು ಉನ್ನತ ಶಿಕ್ಷಣಕ್ಕಾಗಿ ಸೇರಿದರೆ ಇನ್ನೊಬ್ಬಳು ಹೆಸರಿನ ಮುಂದೆ ಡಿಗ್ರಿ ಗೋಸ್ಕರ ಸೇರುವವಳಿದ್ದಳು.


ಜೀವನ ಎಂಬ ಪ್ರಯಾಣವು ಇದೆ ಏನೋ . ನಮ್ಮದೇ  ಆದ ಒಂದು ಜೀವನ ದ ಶೈಲಿ ಇದ್ದರೆ ನಾವು ಭೇಟಿ ಯಾಗುವವರ ಶೈಲಿ ಇನ್ನೊಂದು ತರ ಇರುತ್ತದೆ. ಹೀಗೆ ನಮ್ಮ ಪ್ರಯಾಣದ ನಡುವೆ ನೂರಾರು ಮಂದಿಯನ್ನ ಭೇಟಿಯಾಗುತ್ತೇವೆ. ಕೆಲವರಿಂದ ಹೇಗೆ ಇರಬೇಕೆಂದು  ಪಾಠವನ್ನು ಕಲಿಯುತ್ತೇವೆ  ಇನ್ನು ಉಳಿದವರಿಂದ  ಹೇಗೆ ಇರಬಾರದೆಂದು ಕಲಿಯುತ್ತೇವೆ.


ಸರ್ವಜ್ಞ ಹೇಳಿದಂತೆ -
"ಒಂದೊಂದು ಹನಿಬಿದ್ದು ನಿಂದಲ್ಲಿ ಮಡವಕ್ಕು
ಸಂದ ಸತ್ಪುರುಷ ನೋಡಲಾಗಿ ಪರಬೊಮ್ಮ
ಮುಂದೆ ಬಂದಕ್ಕು
"
(Just like a drop joining a drop can create an ocean, A person by meeting good souls and learning moral values earns an ocean of knowledge)


Comments

  1. ಸುಂದರವಾದ ಬರೆವಣಿಗೆ. ಮನುಷ್ಯ-ಮನಸ್ಸಿನೊಳಗೆ ಅಡಗಿರುವಂತಹ ತುಮುಲದ ಒಳನೋಟವನ್ನು ತುಂಬ ಸುಲಲಿತವಾಗಿ ಬಣ್ಣಿಸಿದ್ದೀರ. ಶುಭವಾಗಲಿ 😃

    ReplyDelete
  2. ಸುಂದರವಾದ ಬರೆವಣಿಗೆ. ಮನುಷ್ಯ-ಮನಸ್ಸಿನೊಳಗೆ ಅಡಗಿರುವಂತಹ ತುಮುಲದ ಒಳನೋಟವನ್ನು ತುಂಬ ಸುಲಲಿತವಾಗಿ ಬಣ್ಣಿಸಿದ್ದೀರ. ಶುಭವಾಗಲಿ 😃

    ReplyDelete

Post a Comment

Popular posts from this blog

ಕ್ಷಮಿಸಿ ಟೀಚರ್ ...!

ಆವತ್ತು ಎಂದಿನಂತೆ ಕಾಲೇಜಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ಅದು ಯಾವತ್ತೂ ಮರೆಯದ ದಿನವಾಗುತ್ತದೆಂದು ಕನಸಲ್ಲೂ ಎಣಿಸಿರಲಿಲ್ಲ . ತಪ್ಪು ಎನ್ನುವುದಕ್ಕಿಂತ ಏನೋ ಪಾಪ ಮಾಡಿದ್ದೇನೆ ಎಂಬ ಭೀತಿ ಇಂದಿಗೂ ನನ್ನನ್ನು ಕಾಡುತ್ತಿದೆ. ನನ್ಮುಂದೆ ಬಸ್ಸೊಂದು ನಿಂತಿತ್ತು. ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟಿರುವುದೆಂದು ಬಸ್ಸು ನೋಡಿದಾಗ  ತಿಳಿಯಿತು. ನಾನೋ ಇದನೆಲ್ಲ ನೋಡುತಿದ್ದರು ನನ್ನ ಮನಸ್ಸು ಏನೋ ಬೇರೆ ಕಡೆಯೇ ತೇಲಿದಂತ ಅನುಭವ. ಆ ಬಸ್ಸಿನ ಕಿಟಕಿಯಿಂದ  ಸುಮಾರು ಇಪ್ಪತೆಂಟು ಮೂವತ್ತು ವರ್ಷದ ಹುಡುಗಿಯೊಬ್ಬಳು ನನ್ನ ಕಡೆ ನೋಡಿ ಕೈ ಬೀಸಿದಂತೆ ಆಯ್ತು. ಆದರೆ ಯಾರೆಂಬುದು ನನಗೆ ತಿಳಿಯಲೇ ಇಲ್ಲ. ನನ್ನ ನೋಡಿ ಕೈ ಬೀಸಿದಳೋ ಅಲ್ಲ ಪಕ್ಕದಲ್ಲಿರುವವರಿಗೆ ಸನ್ನೆ ಮಾಡುತಿದ್ದಳೊ ತಿಳಿಯಲಿಲ್ಲ.ಆಚೆ ಈಚೆ ನೋಡಿದರೆ ಯಾರು ಅವಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಮತ್ತೆ ಅವಳು ನನ್ನನ್ನೇ ನೋಡ್ತಿದಂತೆ ಅನಿಸಿತು. ಏನು ಯೋಚಿಸುತಿದ್ದೆನೋ ದೇವರಿಗೆ ಗೊತ್ತು. ನಾನು ಅವಳಿಗೆ ಪ್ರತಿಕ್ರಿಯಿಸಲೇ  ಇಲ್ಲ. ನಾನು ಅವಳಿಗೆ ಕೈ ಬೀಸುತಿದ್ದರೆ  ನನ್ನ ಗಂಟೇನು  ಹೋಗುತಿತ್ತು ಎಂದು ಇವತ್ತಿನವರೆಗೂ  ನನ್ನನು ನಾನು ಎಷ್ಟು ಬಾರಿ ಬೈದುಕೊಂಡಿದ್ದೇನೋ ಏನೋ. ಸ್ವಲ್ಪ ಹೊತ್ತಾದ ನಂತರ ಯಾರೋ ಬಸ್ಸಿನಿಂದ ಇಳಿದಂತಾಯ್ತು.  ಇಳಿದವಳನ್ನು ನೋಡಿ ಅವಾಕ್ಕಾದೆ . ನಾನು ಕಲಿತ ಶಾಲೆಯಲ್ಲೇ ನನ್ನ ಕಸಿನ್ ಓದುತ್ತಿದ್ದಳು . ಅವಳು ಬಸ್ಸಿನಿಂದ ಇಳಿದಂತೆ ಕಿಟಕಿ ಬದಿಯಲ್ಲಿದ್ದ

ಹೀಗೆ ಒಂದು ದಿನ ಕನಸಲ್ಲಿ ಕಂಡ ನನ್ನ ಕನಸಿನ ಗುಡಿಸಲು

ಕೃಪೆ : ಗೂಗಲ್ ಇಮೇಜ್ಸ್                       ಮಳೆ ಹನಿಗಳು  ಕಿಟಕಿ ಗಾಜಿಗೆ ಬೀಳುವ ಸದ್ದು ಕೇಳಿ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಅಲ್ಲೇ ಮೇಜಲ್ಲಿಟ್ಟ ಬುದ್ಧನ ಮುಗುಳ್ನಗೆ, ಪಕ್ಕದಲ್ಲಿರುವ ಕೃಷ್ಣಾರ್ಜುನರ  ರಥದ ಮಾದರಿ ಕಂಡರೆ  ಏನೋ ಮನಸ್ಸಿಗೆ ಮುದ ನೀಡುವುದು . ಚಿಕ್ಕಂದಿನಿಂದ ಅವೆರಡನ್ನು ಕೊಳ್ಳುವ ಆಸೆ. ಆದರೆ ಎಲ್ಲಿಯೂ ನನಗೆ ಬೇಕಂತಿರುವುದು ಸಿಕ್ಕಿರಲಿಲ್ಲ. ಕಳೆದ ವರ್ಷ ಉಡುಗೊರೆಯಾಗಿ ಪಡೆದಿದ್ದೆ.  ಪರದೆ ಸರಿಸಿ ಕಿಟಕಿ ಹೊರಗೆ ನೋಡಿದ್ರೆ ನಾ ನೆಟ್ಟ ಗುಲಾಬಿ  ಗಿಡದಲ್ಲಿದ್ದ ಒಂದು ಗುಲಾಬಿ ನನ್ನ ನೋಡಿ ನಕ್ಕಂತೆ ಕಾಣುತಿತ್ತು. ಹೂವೆಂದರೆ  ಪಂಚಪ್ರಾಣ. ಮಲ್ಲಿಗೆಯ ಸುವಾಸನೆ, ಗುಲಾಬಿಯ  ಸೌಂದರ್ಯ ಪದಗಳಲ್ಲಿ  ವರ್ಣಿಸಲು ಅಸಾಧ್ಯ.  ಮಳೆ ಬಿದ್ದಾಗ  ಆ ಮಣ್ಣಿನ ಸುವಾಸನೆ ನನ್ನನ್ನು ಮನೆಯಿಂದ  ಹೊರಬರಲು ಆಹ್ವಾನಿಸಿದಂತಾಯ್ತು. ಎದ್ದು ಛತ್ರಿ ತೆಗೊಂಡು ಹೊರಬಂದು ಹಾಗೆಯೇ ಬರಿಗಾಲಲ್ಲಿ ಅಂಗಳದಲ್ಲಿ ನಿಂತು, ನೀರಿನ ಗುಳ್ಳೆಗಳ ಸಾಲು ನೋಡುತ್ತಾ ನಿಂತು ಬಿಟ್ಟೆ. ಹಾಗೆ ದೃಷ್ಟಿ  ಬಿದ್ದದ್ದು ಹುಲ್ಲಿನ ಮೇಲಿರುವ ಆ ಕೆಂಪು ಕೀಟದ ಮೇಲೆ. ಕೇವಲ ಮಳೆಗಾಲದಲ್ಲಿ ಮಾತ್ರ ನಾ ಆ  ಕೀಟವನ್ನು ಕಂಡಿದ್ದು. ಹೆಸರು ಇನ್ನು ಗೊತ್ತಿಲ್ಲ ಆದ್ರೆ ಮಳೆ ಹನಿಗಳೊಂದಿಗೆ ಅವುಗಳು ಆಕಾಶದಿಂದ ಬೀಳುತ್ತವೆ ಎಂದು ಸಣ್ಣದಿರುವಾಗ ಯಾರೋ ಹೇಳಿದ ನೆನಪು. ಬಲಕ್ಕೆ ತಿರುಗಿದರೆ ನನ್ನ ತರಕಾರಿ ತೋಟ. ಬಾಳೆ, ತೆಂಗು, ಮಾವಿನ ಮರಗಳು ಮಳೆಗೆ ಮೈ ಒಡ್ಡಿ ನಿಂ

ಫೀಸ್ ಜಾಸ್ತಿಯಾಗಲು ಕಾರಣ ಪಾಪದವರು ವಿದ್ಯಾವಂತರಾಗ ಬೇಕೆನ್ನುವುದರಿಂದ ಅಂತೆ !!!

ಅದೊಂದು ಸಮಾರಂಭದಲ್ಲಿ ನನ್ನ ಸುತ್ತಮುತ್ತ  ಕೆಲವು ಹೆಂಗಸರು ಕೂತು ಮಾತಾಡುತ್ತಿದ್ದರು. ಹೆಂಗಸು ೧ : (ಪಕ್ಕದಲ್ಲಿ ಕೂತಿದ್ದ ಹುಡುಗಿಯನ್ನ ) "ಏನಮ್ಮ ಏನ್ ಕಲಿತಿದ್ದೀಯಾ ?" ಹೆಂಗಸು ೨ : "ಅವಳನ್ನ ಇಂಜಿನಿಯರಿಂಗ್ ಗೆ ಸೇರಿಸಿದ್ದೀವಿ. ಇನ್ನು ಮುಂದಿನ ವಾರ ಕ್ಲಾಸ್ಸ್ ಸ್ಟಾರ್ಟ್ ಆಗುತ್ತೆ." ಮಗಳಿಗೆ ಕೇಳಿದ ಪ್ರಶ್ನೆಗೆ ತಾಯಿ ಉತ್ತರಿಸಿದರು. ಮಗಳು ತನ್ನ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಳು. ತನ್ನ ಸುತ್ತಮುತ್ತ ಇರುವ ಜನರನ್ನ ಮಾತಾಡಿಸುವದಕ್ಕಿಂತ ಪೊಕೀಮೋನ್ ಹಿಡಿಯುದರಲ್ಲಿ ಬ್ಯುಸಿ ಆಗಿದ್ದಳು. ಹೆಂಗಸು ೧ : "ಒಹ್! ಹಾಗೇನು .ಅಂದ್ರೆ  ಪಿಯುಸಿ ಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿರ್ಬೇಕಲ್ಲ? ಒಳ್ಳೇದು ." ಹೆಂಗಸು ೨ : "ಇಲ್ಲ ಕಣ್ರೀ . ಫೇಲ್ ಆಗಿದ್ರು ಫೇಲ್ ಆದ್ಲು ಎಂದು ಹೇಳೋಕ್ಕೆ ನಾನು ಸಂಕೋಚ ಪಡ್ತಿರ್ಲಿಲ್ಲ. ಅಷ್ಟು ಕಮ್ಮಿ ಮಾರ್ಕ್ಸ್ ತೆಗ್ದಿದ್ದಾಳೆ ನೋಡಿ. ನಮಗೆ ಅವಳು ಇಂಜಿನಿಯರಿಂಗ್ ಮಾಡಬೇಕೆಂಬುದು ಆಸೆ. ಬಿ ಎಸ್ಸಿ ಎಲ್ಲ ಕಲಿತರೆ ಏನು ಸಿಗ್ತದೆ ಹೇಳಿ. ಹಾಗೆ ಮಂಗಳೂರಲ್ಲೇ ಒಂದು ಕಾಲೇಜು ಗೆ  ಮ್ಯಾನೇಜ್ಮೆಂಟ್ ಸೀಟ್ ಅಲ್ಲಿ ಆರ್ಕಿಟೆಕ್ಚರ್ ಗೆ ಸೇರಿಸಿದ್ದೀವಿ. ಈ ಕೋರ್ಸ್ ಗೆ ಸೇರಿದ್ರೆ ೨ ಸಲ ಟೂರ್ ಗೆ ಹೋಗಬಹುದು ಅಂತ ಅವಳ ಗೆಳೆಯರು ಹೇಳಿದ್ದಾರಂತೆ. " ಹೆಂಗಸು ೧: "ಅದಕ್ಕೇನಂತೆ ಬಿಡಿ. ಇರುವುದು ಒಬ್ಬಳು ಮಗಳು ,  ಕಲೀಲಿ. " ಹೆಂಗಸು ೨: "ಏನೋ ಅವ