Skip to main content

Posts

Showing posts from May, 2017

ಅಂದು ಮತ್ತು ಇಂದು .

ಒಂದು ವರ್ಷ ಆಯ್ತು ಮನೆಯಿಂದ ದೂರ  ಇದ್ದು. ಒಂದು ವರ್ಷದೊಳಗೆ ಹಲವಾರು ರೀತಿಯ ಜನರನ್ನು ಭೇಟಿಯಾದರೂ , ಬೇರೆ ಬೇರೆ ಸಂಸ್ಕೃತಿಯ ಪರಿಚಯವಾದರೂ ನಾವು ಹುಟ್ಟಿ ಬೆಳೆದ  ಊರಿನ  ಬದುಕಿನ ಶೈಲಿ, ಅಲ್ಲಿನ ಸಂಸ್ಕೃತಿಯೇ ನಮಗೆ ಶ್ರೇಷ್ಠವೆನಿಸುತ್ತದೆ. ಮನೆಯಲ್ಲಿ ಇರ್ಬೇಕಿದ್ರೆ ಅಮ್ಮ ಉಪ್ಪಿಟ್ಟು ಮಾಡಿದರೆ ಅಯ್ಯೋ ಉಪ್ಪಿಟ್ಟಾ ಎಂದು, ದೋಸೆ ಮಾಡಿದರೆ ದಿನಾಲು ದೋಸೆ ಯಾಕಮ್ಮ ನಿನ್ನೆ  ತಾನೇ ಮಾಡಿದ್ರಿ ಎಂದು ಅಮ್ಮನ ಮೇಲೆ ರೇಗಿಬಿಡುವುದು ರೂಢಿಯಾಗಿತ್ತು. ಸೌತೆಕಾಯಿ ಪಲ್ಯವಾದರೆ ಹಸಿವಿಲ್ಲ ಎಂದು ಹಸಿವಲ್ಲೇ ಮಲಗಿಬಿಡುವುದೂ ಇತ್ತು. ಆದರೆ ಇಂದು ಬೆಳಗ್ಗಿನಿಂದ ರಾತ್ರಿಯವರೆಗೂ ಮೂರುಹೊತ್ತೂ ರೋಟಿ-ದಾಲ್ ತಿಂದರೂ ಬೇಸರವಿಲ್ಲ. ಬೇಸರವಿಲ್ಲ ಎನ್ನುವುದಕ್ಕಿಂತ ಅದಕ್ಕೆ ಒಗ್ಗಿಕೊಂಡುಬಿಟ್ಟಿದೇನೆ ಎಂದರೆ ಸರಿಯಾದೀತು. ಈಗ ಮನೆಗೆ ಹೋದರೆ ಅಮ್ಮ ಗಂಜಿ ಊಟ ಬಡಿಸಿದರೂ ಹಬ್ಬದೂಟ ತಿಂದಷ್ಟು ತೃಪ್ತಿ. ಏಳಲು ಅಲಾರ್ಮ್ ಬೇಕಿರಲಿಲ್ಲ, ಹಕ್ಕಿಗಳ ಇಂಚರಕ್ಕೆ ಅಮ್ಮ ಎದ್ದರೆ, ಅಮ್ಮನ ಧ್ವನಿಗೆ ಮಕ್ಕಳೆಲ್ಲಾ ಎದ್ದು ಬಿಡುತಿದ್ವಿ. ಎದ್ದು ಹೋಗಿ ಮನೆ ಹೊರಗೆ ಜಗಲಿಯಲ್ಲಿ ಕೂತು ಸೂರ್ಯೋದಯ, ಗದ್ದೆಯಲ್ಲಿ ಭತ್ತದ ತೆನೆ, ಅಂಗಳದಲ್ಲಿ ಅರಳಿ ನಿಂತ ಹೂವು, ಗದ್ದೆಯ ಬದಿಯಿಂದ ಸಾಲಾಗಿ ಹೋಗುತ್ತಿರುವ ನವಿಲುಗಳನ್ನು ನೋಡ್ಕೊಂಡು  ಕುಳಿತುಕೊಳ್ಳುವದು ದಿನಚರಿ. ಹಾಗೆ ಕುಳಿತುಕೊಂಡರೆ ಮತ್ತೆ ಏಳುವುದು 'ಕಾಲೇಜಿಗೆ ನಂಗೆ ಹೋಗ್ಲಿಕ್ಕಾ  ಅಲ್ಲಾ  ನಿನಗ  , ಹೊರಡುವ ಯೋಚನೆ ಇ