Skip to main content

Posts

Showing posts from March, 2017

ಕಲೆ !

ಏನಮ್ಮ ನೀವು ಇಡೀ ದಿವಸ ಯಕ್ಷಗಾನ ಅಂದ್ಕೊಂಡು, ರಿಮೋಟ್ ಕೊಡಿ ಎಂದು ಟಿವಿ ರಿಮೋಟ್ ಅಮ್ಮನಿಂದ ತಗೊಂಡು ಕಲರ್ಸ್ ಅಲ್ಲಿ ಬರುವ ಬಿಗ್ ಬಾಸ್ ಕಾರ್ಯಕ್ರಮ ನೋಡ್ಕೊಂಡು ಕುಳಿತೆ. ಇಂದಿನ ಮಕ್ಕಳಿಗೆ ನಮ್ಮ ಕಲೆ ಸಂಸ್ಕೃತಿ ಏನು ಬೇಕಿಲ್ಲ ಎಂದು ಗೊಣಗುತ್ತ ಅಡಿಗೆ ಕೋಣೆಯೊಳಗೆ ಸೇರಿಬಿಟ್ಟರು ಅಮ್ಮ . ಇದು ಒಂದು ವರ್ಷದ ಹಿಂದಿನ ಮಾತು. ಇಂದು ಪರ ಊರಲ್ಲಿ ಇದ್ದುಕೊಂಡು  ತುಳು , ಕನ್ನಡ ಮಾತಾಡುವವರು ಸಿಕ್ಕಿದರೆ, ನಮ್ಮೂರಿನವರು ಎಂದು ಮಂಗಳೂರಿನ ಬಗ್ಗೆ ಮಾತಾಡಲು ಶುರುಮಾಡ್ತೀವಿ. ಯಕ್ಷಗಾನದ ಬಗ್ಗೆ ನಮಗೆ ಗೊತ್ತಿರುವುದು ಚೆಂಡೆಯ ಸದ್ದು, ಮುಖಕ್ಕೆ ಒಂದಷ್ಟು ಬಣ್ಣ ಬಳಿದುಕೊಂಡು ಇಡೀ ರಾತ್ರಿ ನಲಿಯುವ ಒಂದು ಕಲೆ ಎಂಬುದಷ್ಟು ಬಿಟ್ಟು ಸುಮಾರು ಮಂದಿಗೆ  ಅದ್ರ ಬಗ್ಗೆ ಸಾಸಿವೆ ಕಾಳಷ್ಟು ಗೊತ್ತಿಲ್ಲ ಎಂಬುದು ಕಹಿ ಸತ್ಯ. ಇತೀಚೆಗಷ್ಟೇ 'ಪಿಲಿಬೈಲ್ ಯಮುನಕ್ಕ' ಎಂಬ ಸಿನಿಮಾ ಬಿಡಿಗಡೆ ಯಾಗಿತ್ತು. 'ಮಾಯಕದೊಂಜಿ ಪೊನ್ನ ಗಾಳಿ ಬೀಜಿಂದ್ ಗೆ ' ಎಂದು ಪಟ್ಲಾ ಸತೀಶ್ ಶೆಟ್ಟಿ  ಯವರು ಹಾಡಿದ್ದಾರೆ.  ಈ ಹಾಡಿನಿಂದಾಗಿ ಪಟ್ಲಾ ಸತೀಶ್ ಶೆಟ್ಟಿ ಯವರು ಮಂಗಳೂರಿನ ಯುವ  ಜನತೆಯಲ್ಲಿ ಮನೆ ಮಾತಾದರು . ಯಕ್ಷಗಾನ ಕಲೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಈ ದಿಗ್ಗಜನ ಪರಿಚಯ ಸಿನಿಮಾ ದ ಮೂಲಕ ಯುವಜನತೆಯ  ಕಣ್ಣೆದುರಿಗೆ ಬಂತು. ಹೀಗೆ ಯೂಟ್ಯುಬ್ಗ್ ಅಲ್ಲಿ ಅವರ ಈ ಹಾಡುಗಳನ್ನು ಕೇಳುತಿರಬೇಕಿದ್ರೆ ಮೂಡಬಿದ್ರೆಯ  'ಯಕ್ಷ ದ್ರುವ ಪಟ್ಲಾ