ಏನಮ್ಮ ನೀವು ಇಡೀ ದಿವಸ ಯಕ್ಷಗಾನ ಅಂದ್ಕೊಂಡು, ರಿಮೋಟ್ ಕೊಡಿ ಎಂದು ಟಿವಿ ರಿಮೋಟ್ ಅಮ್ಮನಿಂದ ತಗೊಂಡು ಕಲರ್ಸ್ ಅಲ್ಲಿ ಬರುವ ಬಿಗ್ ಬಾಸ್ ಕಾರ್ಯಕ್ರಮ ನೋಡ್ಕೊಂಡು ಕುಳಿತೆ. ಇಂದಿನ ಮಕ್ಕಳಿಗೆ ನಮ್ಮ ಕಲೆ ಸಂಸ್ಕೃತಿ ಏನು ಬೇಕಿಲ್ಲ ಎಂದು ಗೊಣಗುತ್ತ ಅಡಿಗೆ ಕೋಣೆಯೊಳಗೆ ಸೇರಿಬಿಟ್ಟರು ಅಮ್ಮ . ಇದು ಒಂದು ವರ್ಷದ ಹಿಂದಿನ ಮಾತು. ಇಂದು ಪರ ಊರಲ್ಲಿ ಇದ್ದುಕೊಂಡು ತುಳು , ಕನ್ನಡ ಮಾತಾಡುವವರು ಸಿಕ್ಕಿದರೆ, ನಮ್ಮೂರಿನವರು ಎಂದು ಮಂಗಳೂರಿನ ಬಗ್ಗೆ ಮಾತಾಡಲು ಶುರುಮಾಡ್ತೀವಿ. ಯಕ್ಷಗಾನದ ಬಗ್ಗೆ ನಮಗೆ ಗೊತ್ತಿರುವುದು ಚೆಂಡೆಯ ಸದ್ದು, ಮುಖಕ್ಕೆ ಒಂದಷ್ಟು ಬಣ್ಣ ಬಳಿದುಕೊಂಡು ಇಡೀ ರಾತ್ರಿ ನಲಿಯುವ ಒಂದು ಕಲೆ ಎಂಬುದಷ್ಟು ಬಿಟ್ಟು ಸುಮಾರು ಮಂದಿಗೆ ಅದ್ರ ಬಗ್ಗೆ ಸಾಸಿವೆ ಕಾಳಷ್ಟು ಗೊತ್ತಿಲ್ಲ ಎಂಬುದು ಕಹಿ ಸತ್ಯ.
ಇತೀಚೆಗಷ್ಟೇ 'ಪಿಲಿಬೈಲ್ ಯಮುನಕ್ಕ' ಎಂಬ ಸಿನಿಮಾ ಬಿಡಿಗಡೆ ಯಾಗಿತ್ತು. 'ಮಾಯಕದೊಂಜಿ ಪೊನ್ನ ಗಾಳಿ ಬೀಜಿಂದ್ ಗೆ ' ಎಂದು ಪಟ್ಲಾ ಸತೀಶ್ ಶೆಟ್ಟಿ ಯವರು ಹಾಡಿದ್ದಾರೆ. ಈ ಹಾಡಿನಿಂದಾಗಿ ಪಟ್ಲಾ ಸತೀಶ್ ಶೆಟ್ಟಿ ಯವರು ಮಂಗಳೂರಿನ ಯುವ ಜನತೆಯಲ್ಲಿ ಮನೆ ಮಾತಾದರು . ಯಕ್ಷಗಾನ ಕಲೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಈ ದಿಗ್ಗಜನ ಪರಿಚಯ ಸಿನಿಮಾ ದ ಮೂಲಕ ಯುವಜನತೆಯ ಕಣ್ಣೆದುರಿಗೆ ಬಂತು. ಹೀಗೆ ಯೂಟ್ಯುಬ್ಗ್ ಅಲ್ಲಿ ಅವರ ಈ ಹಾಡುಗಳನ್ನು ಕೇಳುತಿರಬೇಕಿದ್ರೆ ಮೂಡಬಿದ್ರೆಯ 'ಯಕ್ಷ ದ್ರುವ ಪಟ್ಲಾ ಫೌಂಡೇಶನ್ ಟ್ರಸ್ಟ್ ' ನ ಉದ್ಘಾಟನೆಯ ಸಮಾರಂಭದ ಅವರ ಒಂದು ಭಾಷಣದ ವಿಡಿಯೋ ಸಿಕ್ಕಿತು. ಕೇಳಲು ಕುತೂಹಲವಾಗಿ ವಿಡಿಯೋ ಪ್ಲೇ ಮಾಡಿದೆ. ಅವರು ಮಾತಾಡಿದ್ದು ಏಳು ನಿಮಿಷವಾದ್ರೂ ಅವರು ಹೇಳಿದ ಒಂದೊಂದು ಮಾತು ಕಟು ಸತ್ಯವಾಗಿತ್ತು.
ಬಲಿಪ ನಾರಾಯಣ ಭಾಗವತರು, ಮಿಜಾರಿನ ಅಣ್ಣಪ್ಪ ಅಂದ್ರೆ ಯಾರು ಎಂದು ಕೇಳಿದರೆ ನೂರರಲ್ಲಿ ಹತ್ತು ಮಂದಿಗೆ ಗೊತ್ತಿರಬಹುದೋ ಏನೋ. ಅದೇ ದೀಪಿಕಾ ಪಡುಕೋಣೆ ಯ ಬಾಯ್ ಫ್ರೆಂಡ್ ಯಾರೆಂದು ಕೇಳಿದ್ರೆ ನಾಲ್ಕನೇ ಕ್ಲಾಸಿನ ಮಗುವಿಗೂ ಗೊತ್ತಿರುತ್ತದೆ. ಇಂದು ಏನಾಗಿದೆಯಂದ್ರೆ ಗೆಳೆಯರೊಡನೆ ಮಾತಾಡುವಾಗ ಟಾಮ್ ಕ್ರೂಸ್ ಯಾರೆಂದು ನಿಮಗೆ ಗೊತ್ತಿಲ್ಲದಿದ್ರೆ ನೀವು ಹಳ್ಳಿ ಗುಗ್ಗು, ಫ್ರೆಂಡ್ಸ್, ಗೇಮ್ ಒಫ್ ಥ್ರೋನ್ಸ್ ನೋಡಿಲ್ಲದಿದ್ರೆ ನೀವು ಬದುಕಿರುವದೇ ವ್ಯರ್ಥ ಎನ್ನುವಷ್ಟರ ಮಟ್ಟಿಗೆ ಹೀಯಾಳಿಸಿ ಬಿಡುತ್ತಾರೆ. ಇಂತ ಒಂದು ವಾತಾವರಣ ಸೃಷ್ಟಿಯಾದ್ರಿಂದ ನಾವು ನಮ್ಮ ಸಂಸ್ಕೃತಿಯ ಕಲೆಗಳನ್ನು ಗುರುತಿಸುವಲ್ಲಿ ವಿಫಲರಾಗುತ್ತೇವೆ.
ಫಸ್ಟ್ ಪಿಯುಸಿ ಯಲ್ಲಿ ಇರ್ಬೇಕಿದ್ರೆ ನಮ್ಮ ಕನ್ನಡದ ಅಧ್ಯಾಪಕರು, ಯಕ್ಷಗಾನ ಕಲಾವಿದರು ಆದ ಅವರು ಹೇಳಿದ ಮಾತು ನೆನಪಿಗೆ ಬರ್ತಿದೆ. ' ಇತ್ತೀಚಿನ ಯಕ್ಷಗಾನಗಳಲ್ಲಿ ಕಲಬೆರಕೆ ಜಾಸ್ತಿಯಾಗಿದೆ , ಕಲಬೆರಕೆ ಎಂದರೆ ಐತಿಹಾಸಿಕ ಕವನಗಳನ್ನು ಬಿಟ್ಟು ನಮ್ಮ ಯುವಜನತೆಯ ಮೆಚ್ಚುಗೆಗೋಸ್ಕರ ಸ್ವಲ್ಪ ಮಸಾಲ ಎಂದು ಏನು ಹೇಳ್ತಿವಿ ಅದನ್ನ ಹಾಕಿಬಿಡ್ತಾರೆ' ಎಂಬುದು. ಇದರಲ್ಲಿ ಯಕ್ಷಗಾನದ ಭಾಗವತರದ್ದು ತಪ್ಪಿಲ್ಲ. ನಮ್ಮ ಕಲೆಯನ್ನು ಹೇಗಾದ್ರು ಉಳಿಸಿಕೊಳ್ಳಬೇಕೆಂದು ಅವರ ಪ್ರಯತ್ನ ಅದು. ಎಷ್ಟೆಂದರೆ ಯಕ್ಷಗಾನವನ್ನು ಆಂಗ್ಲ ಭಾಷೆಯಲ್ಲೂಇಂದು ನಡೆಸುತ್ತಾರೆ.
ಮಂಗಳೂರಿನ ಅನನ್ಯ ಲಕ್ಷಣವೇ ಯಕ್ಷಗಾನ, ಭೂತಾರಾಧನೆ, ನಾಗ ಮಂಡಲ, ಕಂಬಳ ಇಂತಹ ಹಲವಾರು ನಮ್ಮ ಸಂಸ್ಕೃತಿಗಳು. ಮಂಗಳೂರಿನ ಒಂದು ಹಳ್ಳಿಯಲ್ಲಿ ಹುಟ್ಟಿ ಬೆಳೆದ್ರೂ ನಾನು ಆಟಿ ಕಳಂಜ ನೋಡಲಿಲ್ಲ, ಪಾಡ್ದನವನ್ನು ಕೇಳಿದವಳಲ್ಲ. ಮದುವೆ ಮಂಜಿ, ಸೀಮಂತ ದ ಹಾಡು ಗಳು ಹೇಳಲು ಇಂದು ನಮ್ಮನೆಯಲ್ಲಿ ಒಬ್ಬರಿಗೂ ಸರಿಯಾಗಿ ಗೊತ್ತಿಲ್ಲ .
ಬೇರೆ ಕಲೆಗಳನ್ನು ಪ್ರೋತ್ಸಾಹಿಸಿ ತಪ್ಪೇನಿಲ್ಲ. ಆದ್ರೆ ನಮ್ಮ ಸಂಸ್ಕೃತಿಯ ಕಲೆಗಳನ್ನು ಉಳಿಸೋಣ. ಯಕ್ಷಗಾನ ಪ್ರಾದೇಶಿಕ ಭಾಷೆಯಲ್ಲಿ ಇರುವದರಿಂದ ನಾವೇ ಪ್ರೋತ್ಸಾಹ ಕೊಟ್ಟು ಬೆಳೆಸಬೇಕಾಗಿದೆ . ಎಲ್ಲ ಕಲೆಗಳಿಗೂ ಅದರದ್ದೇ ಆದ ಮಹತ್ವ ಇದೆ ಎಂಬುದು ಮರೆಯಬೇಡಿ. ಯಾವುದೇ ಕಲೆಗಾರನ್ನೇ ಆಗಲಿ ಕೀಳು ದೃಷ್ಟಿಯಿಂದ ನೋಡದೆ, ಅವರನ್ನು ಪ್ರಶಂಸಿಸಿ ಅವರೂ ಉನ್ನತ ಸ್ಥಾನಕ್ಕೆ ಏರುವಂತಾಗಲಿ.
ನಮ್ಮ ಸಂಸ್ಕೃತಿಯನ್ನು ಉಳಿಸಲು ಹೋರಾಡುವಂತಹ ಎಲ್ಲ ಕಲಾವಿದರಿಗೂ ನನ್ನ ನಮನಗಳು :)
ಅಕ್ಷರಶಃ ಸತ್ಯ. ನಮ್ಮ ನಾಡಿನ ಬಹಳಷ್ಟು ಕಲೆಗಳು ಇಂದು ಜಾಗತೀಕರಣಕ್ಕೆ ಬಲಿಯಾಗಿವೆ. ಅದರಲ್ಲೂ ದಕ್ಷಿಣ ಕನ್ನಡ , ಮಂಗಳೂರು ಕಡೆಯ ಕಲೆಗಳಂತೂ "ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ" ಅನ್ನುವಷ್ಟು ಕಡೆಗಣಿಸಲ್ಪಟ್ಟಿವೆ. ಜಾಗತೀಕರಣದ ಭರದಲ್ಲಿ ನಮ್ಮ ಮೂಲ ಸಂಸ್ಕೃತಿಯನ್ನೇ ಕಳೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಓಡುತ್ತಿದ್ದೇವೆ.
ReplyDeleteಇಂದು ತಂದೆತಾಯಿಗಳು ತಮ್ಮ ಮಕ್ಕಳಿಗೆ ಶಾಸ್ತ್ರೀಯ ಸಂಗೀತ/ನೃತ್ಯ ಕಲಿಸಲು ಇಚ್ಚಿಸುತ್ತಾರೆ. ಆದರೆ ಕಲಿಕೆಯ ಮೂಲ ಉದ್ದೇಶ Reality show ಗಳಲ್ಲಿ ಭಾಗವಹಿಸುವುದಕ್ಕಾಗಿ ಅಷ್ಟೇ, ನಿಜವಾಗಿಯೂ ಒಂದು ಕಲೆಯನ್ನು ಬೆಳೆಸುವುದಕ್ಕಲ್ಲ. ತಮ್ಮ ಮಾತುಭಾಷೆ ಕಲಿಸುವುದನ್ನೇ ಮರೆತು ಆಂಗ್ಲ ಭಾಷೇಲಿ ಮಾತಾಡುವುದೇ ದೊಡ್ಡಸ್ತಿಕೆ ಎಂದುಕೊಂಡಿರುವ ಅಪ್ಪ-ಅಮ್ಮಂದಿರು, ನಮ್ಮ ಸಂಸ್ಕೃತಿಯ ಕಲೆಗಳನ್ನು ಕಲಿಸಿ ಬೆಳೆಸುವುದು ಆಶ್ಚರ್ಯವೇ ಸರಿ.
ಯಾವುದೇ ಒಂದು ಕಲೆಯ ಬೆಳವಣಿಗೆಗೆ ಮೂಲ ಭಾಷೆಯ ಜ್ಞಾನ ಅಗತ್ಯ. ಭಾಷೆಗೇ ಗಮನ ಕೊಡದ ಹಿರಿಯರಿರುವಾಗ, ಮಕ್ಕಳು ಕಲೆಗಳ ಕಡೆಗೆ ತಮ್ಮ ಒಲವನ್ನು ಹೇಗೆ ತಾನೇ ಬೆಳೆಸಿಕೊಳ್ಳುತ್ತಾರೆ !
ಇಷ್ಟೆಲ್ಲಾ ಲೋಪಗಳನ್ನು ನೋಡಿರುವ ನಾವುಗಳು, ನಾಳೆ ನಮ್ಮ ಕುಟುಂಬ ಬೆಳೆಯುವಾಗ ಇದೇ ತಪ್ಪುಗಳನ್ನು ಮಾಡದೆ ನಮ್ಮ ಸಂಸ್ಕೃತಿಯ ಬಗ್ಗೆ ಒಲವು ಬೆಳೆಯುವಂತೆ ಮಾಡಿದರೆ, ಸಂಸ್ಕೃತಿ ಉಳಿಯುವಿಕೆಗೆ ನಮ್ಮ ಅಲ್ಪ ಕಾಣಿಕೆ ಕೊಟ್ಟಂತಾಗುತ್ತದೆ. ಇದರಿಂದ ಒಂದು ಪೀಳಿಗೆಯೇ ಸರಿದಾರಿಗೆ ಬಂದರೆ, ನಮ್ಮ ಸಮಾಜಕ್ಕೆ ಕೊಡುವ ಅತ್ಯಂತ ಶ್ರೇಷ್ಠ ಕೊಡುಗೆ ಎಂದು ನನ್ನ ಅನಿಸಿಕೆ.
ಕೆಲವರಾದ್ರು ನಮ್ಮ ಸಂಸ್ಕೃತಿಯೆಡೆ ಒಲವು ತೊರಿಸುವವರು ಇದ್ದರೆ ಕಲೆ ಗತಿಸಿಹೋಗದು ಎಂಬ ಆಶಾಕಿರಣ ಮೂಡುತ್ತದೆ. ತಮ್ಮ ಅನಿಸಿಕೆಗೆಗಾಗಿ ಧನ್ಯವಾದಗಳು !
Deleteಈಗ್ಗೆ ಆರು ತಿಂಗಳ ಹಿಂದೆ ಒಂದು exam ಬರಿಯೋದಕ್ಕೆ ಅಂತ ಮಂಗಳೂರಿಗೆ ನಾನು ನನ್ನ friend ಹೋಗಿದ್ವಿ. ಶಿವಮೊಗ್ಗದಿಂದ ರಾತ್ರಿ ಬಿಟ್ಟು ಸುಮಾರು ಐದು ಗಂಟೆಗೆ ಮಂಗಳೂರು enter ಆಗಿದ್ವಿ. ಮೊದ್ಲೇ ನಿದ್ರೆ ಕಡಿಮೆಯಾಗಿತ್ತು. ಆ ಹೊತ್ತಿಗೆ ದೂರದಲ್ಲಿ ಚೆಂಡೆ ಸದ್ದು ಕೇಳಿಸಿತು. ಸಂಪೂರ್ಣ ಎಚ್ಚರ ಆಯ್ತು. ಅಂದೇ ನಾನು ಮೊದಲ ಬಾರಿ ಮಂಗಳೂರು ನೋಡುತ್ತಿದ್ದುದು. ಯಕ್ಷಗಾನ ನಾನು ಬಡಗುತಿಟ್ಟು ನೋಡಿದ್ದೆ. ತೆಂಕುತಿಟ್ಟು ಯಕ್ಷಗಾನ ನೋಡುವ ಆಸೆ ಆಯಿತು. ಇನ್ನೂ ಭೂತಾರಾಧನೆ ನನ್ನ ಇನ್ನೊಬ್ಬ friend ಮನೇಲಿ (ಮೂಡುಬಿದಿರೆ ಸಮೀಪ) ಮಾಡಿಸಿದ್ದರು. ಅದೂ ಎರಡು ದಿನ ನಿದ್ದೆಗೆಟ್ಟು ನೋಡಿದ್ದೆ.
ReplyDeleteಮಂಗಳೂರಿನಂತಹ (ದ.ಕ.) endemic cultures ಇರುವ ಊರುಗಳು ಕಡಿಮೆ. I feel proud to be living in a time and place like these to witness them.
Oh.. Nice :)
Delete