Skip to main content

ಅವಳು !

ಅಂತರ್ಜಾಲ, ಆಧುನಿಕತೆ ಎಂಬ ಮಾಯಾಲೋಕದಲ್ಲಿ 
ಸಿಲುಕಿದ್ದ ಅವಳು,ಕಾಲಚಕ್ರ ಉರುಳುತಿದ್ದಂತೆ
 ತನ್ನನು ತಾನು ಮರೆತಿದ್ದಳು ! ಮೂಕಪ್ರೇಕ್ಷಕಿಯಾದಳು ! 
ಹೀಗೆ ಒಂದು ದಿನ ,
ತನ್ನ ಬಾಲ್ಯ ವನ್ನು ನೆನಪಿಸಿಕೊಳುತಿದ್ದ ಅವಳಿಗೆ,
 ತಾನು ಏನೋ ಕಳೆದು ಕೊಂಡಿದ್ದೆನೆಂದು ಅರಿವಾಯಿತು !
ಅದು ಏನೆಂಬುದು ಗೊತ್ತಾದಂತೆ , 
ಪೆನ್ನು ಪೇಪರ್ ತೆಗೆದು ಬರೆಯಲು ಶುರು ಮಾಡಿಯೇಬಿಟ್ಟಳು !

Comments

Popular posts from this blog

ಹೀಗೆ ಒಂದು ದಿನ ಕನಸಲ್ಲಿ ಕಂಡ ನನ್ನ ಕನಸಿನ ಗುಡಿಸಲು

ಕೃಪೆ : ಗೂಗಲ್ ಇಮೇಜ್ಸ್                       ಮಳೆ ಹನಿಗಳು  ಕಿಟಕಿ ಗಾಜಿಗೆ ಬೀಳುವ ಸದ್ದು ಕೇಳಿ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಅಲ್ಲೇ ಮೇಜಲ್ಲಿಟ್ಟ ಬುದ್ಧನ ಮುಗುಳ್ನಗೆ, ಪಕ್ಕದಲ್ಲಿರುವ ಕೃಷ್ಣಾರ್ಜುನರ  ರಥದ ಮಾದರಿ ಕಂಡರೆ  ಏನೋ ಮನಸ್ಸಿಗೆ ಮುದ ನೀಡುವುದು . ಚಿಕ್ಕಂದಿನಿಂದ ಅವೆರಡನ್ನು ಕೊಳ್ಳುವ ಆಸೆ. ಆದರೆ ಎಲ್ಲಿಯೂ ನನಗೆ ಬೇಕಂತಿರುವುದು ಸಿಕ್ಕಿರಲಿಲ್ಲ. ಕಳೆದ ವರ್ಷ ಉಡುಗೊರೆಯಾಗಿ ಪಡೆದಿದ್ದೆ.  ಪರದೆ ಸರಿಸಿ ಕಿಟಕಿ ಹೊರಗೆ ನೋಡಿದ್ರೆ ನಾ ನೆಟ್ಟ ಗುಲಾಬಿ  ಗಿಡದಲ್ಲಿದ್ದ ಒಂದು ಗುಲಾಬಿ ನನ್ನ ನೋಡಿ ನಕ್ಕಂತೆ ಕಾಣುತಿತ್ತು. ಹೂವೆಂದರೆ  ಪಂಚಪ್ರಾಣ. ಮಲ್ಲಿಗೆಯ ಸುವಾಸನೆ, ಗುಲಾಬಿಯ  ಸೌಂದರ್ಯ ಪದಗಳಲ್ಲಿ  ವರ್ಣಿಸಲು ಅಸಾಧ್ಯ.  ಮಳೆ ಬಿದ್ದಾಗ  ಆ ಮಣ್ಣಿನ ಸುವಾಸನೆ ನನ್ನನ್ನು ಮನೆಯಿಂದ  ಹೊರಬರಲು ಆಹ್ವಾನಿಸಿದಂತಾಯ್ತು. ಎದ್ದು ಛತ್ರಿ ತೆಗೊಂಡು ಹೊರಬಂದು ಹಾಗೆಯೇ ಬರಿಗಾಲಲ್ಲಿ ಅಂಗಳದಲ್ಲಿ ನಿಂತು, ನೀರಿನ ಗುಳ್ಳೆಗಳ ಸಾಲು ನೋಡುತ್ತಾ ನಿಂತು ಬಿಟ್ಟೆ. ಹಾಗೆ ದೃಷ್ಟಿ  ಬಿದ್ದದ್ದು ಹುಲ್ಲಿನ ಮೇಲಿರುವ ಆ ಕೆಂಪು ಕೀಟದ ಮೇಲೆ. ಕೇವಲ ಮಳೆಗಾಲದಲ್ಲಿ ಮಾತ್ರ ನಾ ಆ  ಕೀಟವನ್ನು ಕಂಡಿದ್ದು. ಹೆಸರು ಇನ್ನು ಗೊತ್ತಿಲ್ಲ ಆದ್ರೆ ಮಳೆ ಹನಿಗಳೊಂದಿಗೆ ಅವುಗಳು ಆಕಾಶದಿಂ...

ಕಲೆ !

ಏನಮ್ಮ ನೀವು ಇಡೀ ದಿವಸ ಯಕ್ಷಗಾನ ಅಂದ್ಕೊಂಡು, ರಿಮೋಟ್ ಕೊಡಿ ಎಂದು ಟಿವಿ ರಿಮೋಟ್ ಅಮ್ಮನಿಂದ ತಗೊಂಡು ಕಲರ್ಸ್ ಅಲ್ಲಿ ಬರುವ ಬಿಗ್ ಬಾಸ್ ಕಾರ್ಯಕ್ರಮ ನೋಡ್ಕೊಂಡು ಕುಳಿತೆ. ಇಂದಿನ ಮಕ್ಕಳಿಗೆ ನಮ್ಮ ಕಲೆ ಸಂಸ್ಕೃತಿ ಏನು ಬೇಕಿಲ್ಲ ಎಂದು ಗೊಣಗುತ್ತ ಅಡಿಗೆ ಕೋಣೆಯೊಳಗೆ ಸೇರಿಬಿಟ್ಟರು ಅಮ್ಮ . ಇದು ಒಂದು ವರ್ಷದ ಹಿಂದಿನ ಮಾತು. ಇಂದು ಪರ ಊರಲ್ಲಿ ಇದ್ದುಕೊಂಡು  ತುಳು , ಕನ್ನಡ ಮಾತಾಡುವವರು ಸಿಕ್ಕಿದರೆ, ನಮ್ಮೂರಿನವರು ಎಂದು ಮಂಗಳೂರಿನ ಬಗ್ಗೆ ಮಾತಾಡಲು ಶುರುಮಾಡ್ತೀವಿ. ಯಕ್ಷಗಾನದ ಬಗ್ಗೆ ನಮಗೆ ಗೊತ್ತಿರುವುದು ಚೆಂಡೆಯ ಸದ್ದು, ಮುಖಕ್ಕೆ ಒಂದಷ್ಟು ಬಣ್ಣ ಬಳಿದುಕೊಂಡು ಇಡೀ ರಾತ್ರಿ ನಲಿಯುವ ಒಂದು ಕಲೆ ಎಂಬುದಷ್ಟು ಬಿಟ್ಟು ಸುಮಾರು ಮಂದಿಗೆ  ಅದ್ರ ಬಗ್ಗೆ ಸಾಸಿವೆ ಕಾಳಷ್ಟು ಗೊತ್ತಿಲ್ಲ ಎಂಬುದು ಕಹಿ ಸತ್ಯ. ಇತೀಚೆಗಷ್ಟೇ 'ಪಿಲಿಬೈಲ್ ಯಮುನಕ್ಕ' ಎಂಬ ಸಿನಿಮಾ ಬಿಡಿಗಡೆ ಯಾಗಿತ್ತು. 'ಮಾಯಕದೊಂಜಿ ಪೊನ್ನ ಗಾಳಿ ಬೀಜಿಂದ್ ಗೆ ' ಎಂದು ಪಟ್ಲಾ ಸತೀಶ್ ಶೆಟ್ಟಿ  ಯವರು ಹಾಡಿದ್ದಾರೆ.  ಈ ಹಾಡಿನಿಂದಾಗಿ ಪಟ್ಲಾ ಸತೀಶ್ ಶೆಟ್ಟಿ ಯವರು ಮಂಗಳೂರಿನ ಯುವ  ಜನತೆಯಲ್ಲಿ ಮನೆ ಮಾತಾದರು . ಯಕ್ಷಗಾನ ಕಲೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಈ ದಿಗ್ಗಜನ ಪರಿಚಯ ಸಿನಿಮಾ ದ ಮೂಲಕ ಯುವಜನತೆಯ  ಕಣ್ಣೆದುರಿಗೆ ಬಂತು. ಹೀಗೆ ಯೂಟ್ಯುಬ್ಗ್ ಅಲ್ಲಿ ಅವರ ಈ ಹಾಡುಗಳನ್ನು ಕೇಳುತಿರಬೇಕಿದ್ರೆ ಮೂಡಬಿದ್ರೆಯ  'ಯಕ್...

ಫೀಸ್ ಜಾಸ್ತಿಯಾಗಲು ಕಾರಣ ಪಾಪದವರು ವಿದ್ಯಾವಂತರಾಗ ಬೇಕೆನ್ನುವುದರಿಂದ ಅಂತೆ !!!

ಅದೊಂದು ಸಮಾರಂಭದಲ್ಲಿ ನನ್ನ ಸುತ್ತಮುತ್ತ  ಕೆಲವು ಹೆಂಗಸರು ಕೂತು ಮಾತಾಡುತ್ತಿದ್ದರು. ಹೆಂಗಸು ೧ : (ಪಕ್ಕದಲ್ಲಿ ಕೂತಿದ್ದ ಹುಡುಗಿಯನ್ನ ) "ಏನಮ್ಮ ಏನ್ ಕಲಿತಿದ್ದೀಯಾ ?" ಹೆಂಗಸು ೨ : "ಅವಳನ್ನ ಇಂಜಿನಿಯರಿಂಗ್ ಗೆ ಸೇರಿಸಿದ್ದೀವಿ. ಇನ್ನು ಮುಂದಿನ ವಾರ ಕ್ಲಾಸ್ಸ್ ಸ್ಟಾರ್ಟ್ ಆಗುತ್ತೆ." ಮಗಳಿಗೆ ಕೇಳಿದ ಪ್ರಶ್ನೆಗೆ ತಾಯಿ ಉತ್ತರಿಸಿದರು. ಮಗಳು ತನ್ನ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಳು. ತನ್ನ ಸುತ್ತಮುತ್ತ ಇರುವ ಜನರನ್ನ ಮಾತಾಡಿಸುವದಕ್ಕಿಂತ ಪೊಕೀಮೋನ್ ಹಿಡಿಯುದರಲ್ಲಿ ಬ್ಯುಸಿ ಆಗಿದ್ದಳು. ಹೆಂಗಸು ೧ : "ಒಹ್! ಹಾಗೇನು .ಅಂದ್ರೆ  ಪಿಯುಸಿ ಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿರ್ಬೇಕಲ್ಲ? ಒಳ್ಳೇದು ." ಹೆಂಗಸು ೨ : "ಇಲ್ಲ ಕಣ್ರೀ . ಫೇಲ್ ಆಗಿದ್ರು ಫೇಲ್ ಆದ್ಲು ಎಂದು ಹೇಳೋಕ್ಕೆ ನಾನು ಸಂಕೋಚ ಪಡ್ತಿರ್ಲಿಲ್ಲ. ಅಷ್ಟು ಕಮ್ಮಿ ಮಾರ್ಕ್ಸ್ ತೆಗ್ದಿದ್ದಾಳೆ ನೋಡಿ. ನಮಗೆ ಅವಳು ಇಂಜಿನಿಯರಿಂಗ್ ಮಾಡಬೇಕೆಂಬುದು ಆಸೆ. ಬಿ ಎಸ್ಸಿ ಎಲ್ಲ ಕಲಿತರೆ ಏನು ಸಿಗ್ತದೆ ಹೇಳಿ. ಹಾಗೆ ಮಂಗಳೂರಲ್ಲೇ ಒಂದು ಕಾಲೇಜು ಗೆ  ಮ್ಯಾನೇಜ್ಮೆಂಟ್ ಸೀಟ್ ಅಲ್ಲಿ ಆರ್ಕಿಟೆಕ್ಚರ್ ಗೆ ಸೇರಿಸಿದ್ದೀವಿ. ಈ ಕೋರ್ಸ್ ಗೆ ಸೇರಿದ್ರೆ ೨ ಸಲ ಟೂರ್ ಗೆ ಹೋಗಬಹುದು ಅಂತ ಅವಳ ಗೆಳೆಯರು ಹೇಳಿದ್ದಾರಂತೆ. " ಹೆಂಗಸು ೧: "ಅದಕ್ಕೇನಂತೆ ಬಿಡಿ. ಇರುವುದು ಒಬ್ಬಳು ಮಗಳು ,  ಕಲೀಲಿ. " ಹೆಂಗಸು ೨: "ಏನೋ ಅವ...