ನವಿಲೊಂದು ನಿಂತಿತ್ತು ಇಂದು ಎನ್ನ ಮುಂದೆ ,
ಅದನ್ನ ನೋಡಿ ಎನ್ನ ಮನ ಅತ್ತಿತು !
ಕಾಲವೊಂದಿತ್ತು ನಾ ನವಿಲ ಕಂಡರೆ ಜಿಗಿಯುತಿದ್ದೆ
ಆ ಹರುಷ ಇಂದು ಎನ್ನಲ್ಲಿ ಮರೆಯಾಗಿತ್ತು !
ಎರಡು ಮೈಲು ದೂರದಲ್ಲಿದ್ದ
ಮಯೂರನ ಕಂಡರೆ ಕಣ್ಣಿಗೆ ಹಬ್ಬ !
ಇಂದು ಎರಡು ಹೆಜ್ಜೆ ದೂರವಿದ್ದರು,
ನೋಡಲು ಒಲ್ಲೆ ಎಂದೆ !
ಮುಂಗಾರು ಮಳೆಗೆ ಗರಿಬಿಚ್ಚಿ ,
ನಲಿಯಬೇಕಿದ್ದ ನವಿಲು,
ಇಂದು ಗರಿಯ ಮುದುರಿಕೊಂಡು ,
ಅತ್ತ ಇತ್ತ ನೋಡುತ್ತಿತ್ತು !
ಕಾಡು ನಾಡಾಗಿ ಮಾರ್ಪಾಡಾಗಿತ್ತು,
ತನ್ನ ಕಾಡ ಬಿಟ್ಟು ,
ನಾಡಿಗೆ ಬಂದ ನವಿಲು ಇಂದು ,
ಅನಾಥವಾಗಿತ್ತು !!!
ಅದನ್ನ ನೋಡಿ ಎನ್ನ ಮನ ಅತ್ತಿತು !
ಕಾಲವೊಂದಿತ್ತು ನಾ ನವಿಲ ಕಂಡರೆ ಜಿಗಿಯುತಿದ್ದೆ
ಎರಡು ಮೈಲು ದೂರದಲ್ಲಿದ್ದ
ಮಯೂರನ ಕಂಡರೆ ಕಣ್ಣಿಗೆ ಹಬ್ಬ !
ಇಂದು ಎರಡು ಹೆಜ್ಜೆ ದೂರವಿದ್ದರು,
ನೋಡಲು ಒಲ್ಲೆ ಎಂದೆ !
ಮುಂಗಾರು ಮಳೆಗೆ ಗರಿಬಿಚ್ಚಿ ,
ನಲಿಯಬೇಕಿದ್ದ ನವಿಲು,
ಇಂದು ಗರಿಯ ಮುದುರಿಕೊಂಡು ,
ಅತ್ತ ಇತ್ತ ನೋಡುತ್ತಿತ್ತು !
ಕಾಡು ನಾಡಾಗಿ ಮಾರ್ಪಾಡಾಗಿತ್ತು,
ತನ್ನ ಕಾಡ ಬಿಟ್ಟು ,
ನಾಡಿಗೆ ಬಂದ ನವಿಲು ಇಂದು ,
ಅನಾಥವಾಗಿತ್ತು !!!
Great job, Supreetha!👍 Keep writing and all the very best!☺️
ReplyDeleteThank you Amoolya :)
Delete