Skip to main content

Posts

Showing posts from September, 2018
ಬೇಸಿಗೆ ರಜೆ ಬಂತೆಂದರೆ ಸಾಕು ಎಂದು ಎಲ್ಲರೂ ಕಾಯುತಿದ್ದರೆ, ನಾನು ರಜೆ ಸಿಕ್ಕರೆ ಶಾಲೆ ಶುರುವಾಗಲು ಕಾಯುತಿದ್ದೆ. ಶಾಲೆಗೆ ಹೋದರೆ ಒಂದು ಘಂಟೆಯಾದ್ರೂ ಆಡಲು ಅವಕಾಶ ಇತ್ತು. ಈಗ ದೊಡ್ಡವಳಾದ್ರಿಂದ ಮನೆಯಲ್ಲಿ ಕುಣಿದು ಕುಪ್ಪಳಿಸಿ ಆಡಲು ಅವಕಾಶವಿರಲಿಲ್ಲ. ಹುಡುಗಿ ದೊಡ್ಡವಳಾದ ಮೇಲು , ಹೊರಗೆ ಹೋಗಿ ಆಡಿದ್ರೆ ಊರಿನವರು ಏನು ಹೇಳಿಯಾರು ಎಂಬ ಭಯ.  ಬೆಳಿಗ್ಗೆಯಾದ್ರೆ ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಿಯಾದ್ರು ಸಮಯ ಹೋಗುತಿತ್ತು. ಮಧ್ಯಾಹ್ನ ಅಮ್ಮ ಮಲಗಿದ್ರೆ ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ಮನೆಯಲ್ಲಿ ಕೂರಲು ಬೇಜಾರು. ಇದ್ದ ಕಥೆ ಪುಸ್ತಕಗಳನ್ನೆಲ್ಲ  ಆಗಲೇ ಮೂರ್ನಾಲ್ಕು ಸಲ ಓದಿ ಆಗಿರುತ್ತಿತ್ತು. ಏನು ಮಾಡಬೇಕೆಂದು ತೋಚದಿದ್ದಾಗ , ಕಾಣಿಸಿದ್ದು ವಿವಾಹದ ಆಮಂತ್ರಣ ಪತ್ರಿಕೆಗಳು ಹಾಗು ಹಳೆ ಪುಸ್ತಕಗಳ ರಟ್ಟುಗಳು. ವಿವಿಧ ಶೈಲಿಗಳ ಆಮಂತ್ರಣ ಪತ್ರಿಕೆಗಳನ್ನು ಒಟ್ಟು ಹಾಕಿ, ಅವುಗಳನ್ನು ಕತ್ತರಿಸುತ್ತಾ ಏನಾದ್ರು ಒಂದು ಮಾಡಿ ಸಮಯ ಕಳೆಯುತ್ತಿದ್ದೆ. ಅಮ್ಮ ನಿದ್ದೆ ಯಿಂದ ಎದ್ದ ಕೂಡಲೇ, ಇನ್ನು ಮದುವೆ ಸಮಾರಂಭ ಮುಗಿಯದ ಪತ್ರಿಕೆಗಳನ್ನು ಹರಿದಿದಕ್ಕೆ ಬೈಗುಳ ತಿನ್ನುವುದು ರೂಢಿಯಾಗಿತ್ತು. ಹೀಗೆ ಸಣ್ಣ ಪುಟ್ಟ ಕರಕೌಶಲಗಳನ್ನು ಮಾಡುತ್ತಾ, ಕತೆ ಪುಸ್ತಕ ಓದುತ್ತ, ಹಳೆ ಬುಕ್ಕುಗಳ ರಟ್ಟು ಹಿಡ್ಕೊಂಡು ಕಂಪ್ಯೂಟರ್ ಮಾಡುತ್ತಾ, ಹಿಂದಿನ ತರಗತಿಯ ಪುಸ್ತಕಗಳಲ್ಲಿ ಇದ್ದ ಚಿತ್ರಗಳನ್ನು ಕತ್ತರಿಸಿ ಒಂದು ಪುಸ್ತಕದಲ್ಲಿ ಅಂಟಿಸುತ್ತಾ  ನನಗೆ ಮ