Skip to main content

Posts

ಜೀವನ ಎಂಬ ಈ ಪ್ರಯಾಣದಲ್ಲಿ ಸಾಗುತ್ತಿದ್ದಂತೆ ...!

ದೀಪಾವಳಿಯ ರಜೆ ಮುಗಿಯಿತು, ಮನಸ್ಸು ಒಪ್ಪದಿದ್ದರು ಮನೆಯಿಂದ ಹೊರಡಲೇ ಬೇಕು. ಇತ್ತೀಚೆಗಷ್ಟೇ ಕಾಲೇಜು ಮುಗಿಸಿ ಕೆಲಸದ ನಿಮಿತ್ತ ಮೈಸೂರಲ್ಲಿ ಟ್ರೈನಿಂಗ್ ಮುಗಿಸಿಕೊಂಡು  ಹೈದೆರಾಬಾದಿಗೆ ಟ್ರಾನ್ಸ್ಫರ್ ಆಗಿತ್ತು. ಕಾಲೇಜಲ್ಲಿ ಇರಬೇಕಿದ್ದರೆ ಮನೆಯಿಂದ ದೂರ ಇರಬೇಕು, ಬ್ಯಾಚುಲರ್ ಲೈಫ್ ಅಂದರೆ ಏನೆಂಬುದು ಅನುಭವಿಸಬೇಕೆಂಬ ಕಾತುರ. ಆದರೆ  ಈಗ ಮನೆಗೆ ಹೊರಡಲು ತುದಿಗಾಲಲ್ಲಿ ನಿಲ್ಲುತ್ತೇವೆ, ರಜೆ ಮುಗಿಸಿಕೊಂಡು ಮನೆಯಿಂದ ಹಿಂದೆ ಹೊರಡಬೇಕಿದ್ದರೆ  ಮನಸ್ಸು ಭಾರವಾಗುತ್ತದೆ. ಮನೆಯಿಂದ ಸುಮಾರು ಮೂರು ಗಂಟೆಗೆ ಬಸ್ಸು ಹತ್ತಿದ್ದೆ. ಪ್ರಯಾಣಿಸುವಾಗ ಕಿಟಕಿ ಬದಿಯಲ್ಲಿ ಕೂರುವುದಂದ್ರೆ  ಅದೇನೋ  ನನಗೆ ಚಿಕ್ಕಂದಿನಿಂದ ಇಷ್ಟವಾಗಿತ್ತು. ಶಾಲೆಗೆ ಬಸ್ಸಲ್ಲಿ ಹೊರಡಬೇಕಿದ್ದರೆ ಕಿಟಕಿ ಬದಿಯಲ್ಲಿ  ಕೂರಲು ಅಣ್ಣನೊಡನೆ ಜಗಳವಾಡುವುದು ರೂಢಿಯಾಗಿತ್ತು. ನನ್ನ ಸೀಟ್ ಹುಡುಕುತ್ತ ಹೋಗಿ ನೋಡಿದರೆ ಅಲ್ಲಿ ಒಬ್ಬಳು, ಕಿವಿಗೆ  ಇಯರ್ ಫೋನ್  ಸಿಕ್ಕಿಸಿಕೊಂಡು ಅವಳ  ಲೋಕದಲ್ಲೇ ಮಗ್ನಳಾಗಿ ಕೂತಿದ್ದಳು. ಕಿಟಿಕಿ ಬದಿ ಕೂರಬೇಕೆಂದರೆ ಈಗಲೂ ನನ್ನೊಳಗಿರುವ ಆ ಹಠಾತ್ತಾದ ಪುಟ್ಟ ಹುಡುಗಿ ಎದ್ದು ಬಿಡುತ್ತಾಳೆ. ಅಲ್ಲಿ ಕೂತಿದ್ದವಳು ...

ಕಾಡು ನಾಡಾದರೆ....!!!!!

                                ನವಿಲೊಂದು ನಿಂತಿತ್ತು ಇಂದು ಎನ್ನ ಮುಂದೆ , ಅದನ್ನ ನೋಡಿ ಎನ್ನ ಮನ ಅತ್ತಿತು ! ಕಾಲವೊಂದಿತ್ತು ನಾ ನವಿಲ ಕಂಡರೆ ಜಿಗಿಯುತಿದ್ದೆ ಆ ಹರುಷ ಇಂದು ಎನ್ನಲ್ಲಿ ಮರೆಯಾಗಿತ್ತು ! ಎರಡು ಮೈಲು ದೂರದಲ್ಲಿದ್ದ ಮಯೂರನ  ಕಂಡರೆ ಕಣ್ಣಿಗೆ ಹಬ್ಬ ! ಇಂದು ಎರಡು ಹೆಜ್ಜೆ ದೂರವಿದ್ದರು,  ನೋಡಲು ಒಲ್ಲೆ ಎಂದೆ ! ಮುಂಗಾರು ಮಳೆಗೆ ಗರಿಬಿಚ್ಚಿ , ನಲಿಯಬೇಕಿದ್ದ ನವಿಲು, ಇಂದು ಗರಿಯ ಮುದುರಿಕೊಂಡು , ಅತ್ತ ಇತ್ತ ನೋಡುತ್ತಿತ್ತು ! ಕಾಡು ನಾಡಾಗಿ ಮಾರ್ಪಾಡಾಗಿತ್ತು, ತನ್ನ ಕಾಡ ಬಿಟ್ಟು , ನಾಡಿಗೆ ಬಂದ ನವಿಲು ಇಂದು , ಅನಾಥವಾಗಿತ್ತು !!!

ಅವಳು !

ಅಂತರ್ಜಾಲ, ಆಧುನಿಕತೆ ಎಂಬ ಮಾಯಾಲೋಕದಲ್ಲಿ  ಸಿಲುಕಿದ್ದ ಅವಳು,ಕಾಲಚಕ್ರ ಉರುಳುತಿದ್ದಂತೆ  ತನ್ನನು ತಾನು ಮರೆತಿದ್ದಳು ! ಮೂಕಪ್ರೇಕ್ಷಕಿಯಾದಳು !  ಹೀಗೆ ಒಂದು ದಿನ , ತನ್ನ ಬಾಲ್ಯ ವನ್ನು ನೆನಪಿಸಿಕೊಳುತಿದ್ದ ಅವಳಿಗೆ,  ತಾನು ಏನೋ ಕಳೆದು ಕೊಂಡಿದ್ದೆನೆಂದು ಅರಿವಾಯಿತು ! ಅದು ಏನೆಂಬುದು ಗೊತ್ತಾದಂತೆ ,  ಪೆನ್ನು ಪೇಪರ್ ತೆಗೆದು ಬರೆಯಲು ಶುರು ಮಾಡಿಯೇಬಿಟ್ಟಳು !