Skip to main content

ಕ್ಷಮಿಸಿ ಟೀಚರ್ ...!


ಆವತ್ತು ಎಂದಿನಂತೆ ಕಾಲೇಜಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ಅದು ಯಾವತ್ತೂ ಮರೆಯದ ದಿನವಾಗುತ್ತದೆಂದು ಕನಸಲ್ಲೂ ಎಣಿಸಿರಲಿಲ್ಲ . ತಪ್ಪು ಎನ್ನುವುದಕ್ಕಿಂತ ಏನೋ ಪಾಪ ಮಾಡಿದ್ದೇನೆ ಎಂಬ ಭೀತಿ ಇಂದಿಗೂ ನನ್ನನ್ನು ಕಾಡುತ್ತಿದೆ. ನನ್ಮುಂದೆ ಬಸ್ಸೊಂದು ನಿಂತಿತ್ತು. ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟಿರುವುದೆಂದು ಬಸ್ಸು ನೋಡಿದಾಗ  ತಿಳಿಯಿತು. ನಾನೋ ಇದನೆಲ್ಲ ನೋಡುತಿದ್ದರು ನನ್ನ ಮನಸ್ಸು ಏನೋ ಬೇರೆ ಕಡೆಯೇ ತೇಲಿದಂತ ಅನುಭವ. ಆ ಬಸ್ಸಿನ ಕಿಟಕಿಯಿಂದ  ಸುಮಾರು ಇಪ್ಪತೆಂಟು ಮೂವತ್ತು ವರ್ಷದ ಹುಡುಗಿಯೊಬ್ಬಳು ನನ್ನ ಕಡೆ ನೋಡಿ ಕೈ ಬೀಸಿದಂತೆ ಆಯ್ತು. ಆದರೆ ಯಾರೆಂಬುದು ನನಗೆ ತಿಳಿಯಲೇ ಇಲ್ಲ. ನನ್ನ ನೋಡಿ ಕೈ ಬೀಸಿದಳೋ ಅಲ್ಲ ಪಕ್ಕದಲ್ಲಿರುವವರಿಗೆ ಸನ್ನೆ ಮಾಡುತಿದ್ದಳೊ ತಿಳಿಯಲಿಲ್ಲ.ಆಚೆ ಈಚೆ ನೋಡಿದರೆ ಯಾರು ಅವಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಮತ್ತೆ ಅವಳು ನನ್ನನ್ನೇ ನೋಡ್ತಿದಂತೆ ಅನಿಸಿತು. ಏನು ಯೋಚಿಸುತಿದ್ದೆನೋ ದೇವರಿಗೆ ಗೊತ್ತು. ನಾನು ಅವಳಿಗೆ ಪ್ರತಿಕ್ರಿಯಿಸಲೇ  ಇಲ್ಲ. ನಾನು ಅವಳಿಗೆ ಕೈ ಬೀಸುತಿದ್ದರೆ  ನನ್ನ ಗಂಟೇನು  ಹೋಗುತಿತ್ತು ಎಂದು ಇವತ್ತಿನವರೆಗೂ  ನನ್ನನು ನಾನು ಎಷ್ಟು ಬಾರಿ ಬೈದುಕೊಂಡಿದ್ದೇನೋ ಏನೋ.

ಸ್ವಲ್ಪ ಹೊತ್ತಾದ ನಂತರ ಯಾರೋ ಬಸ್ಸಿನಿಂದ ಇಳಿದಂತಾಯ್ತು.  ಇಳಿದವಳನ್ನು ನೋಡಿ ಅವಾಕ್ಕಾದೆ . ನಾನು ಕಲಿತ ಶಾಲೆಯಲ್ಲೇ ನನ್ನ ಕಸಿನ್ ಓದುತ್ತಿದ್ದಳು . ಅವಳು ಬಸ್ಸಿನಿಂದ ಇಳಿದಂತೆ ಕಿಟಕಿ ಬದಿಯಲ್ಲಿದ್ದ ಆ ಹುಡುಗಿ ನಮಗೆ ಒಂಬತ್ತನೇ ಕ್ಲಾಸಿನಲ್ಲಿ ಕನ್ನಡ ಕಲಿಸಿದ ಅಧ್ಯಾಪಕಿಯೆಂದು ಹೊಳೆಯಿತು. ಅಯ್ಯೋ ಪಾಠ ಕಲಿಸಿದ ಗುರುವಿನ ಪರಿಚಯ ನಂಗಾಗಲಿಲ್ಲಲ್ವ ಎಂಬುದನ್ನು ಅರಿತು ಮನಸ್ಸು ಭಾರವಾಯ್ತು. ಹಾಗೇನೇ ಆ ಕಿಟಕಿ ಕಡೆ ಕಣ್ಣು ಹಾಯಿಸಿದೆ. ಅವರ  ಪಕ್ಕದಲ್ಲಿ ಕೂತಿರುವವರು ಈಗ ಕಿಟಕಿ ಸರಿಸಿ  ನನ್ನ ನೋಡಿ 'ಹಾಯ್' ಹೇಳಿದರು. ಅವರು ವಿಜ್ಞಾನ ಅಧ್ಯಾಪಕಿಯಾಗಿದರು. ಅವರನ್ನು ನೋಡಿದ ತಕ್ಷಣ ಪರಿಚಯವಾಗಿ ಮಾತಾಡಬೇಕೆಂದು ಹೊರಟಾಗ ನಾ ಹೋಗುವ  ಬಸ್ ಬಂತು. ಹಾಗೇನೇ ಅವರಿಗೆ ಕೈ ಬೀಸಿ ಬಸ್ ಹತ್ತಿದೆ. ಆದರೆ ಕೆಲವು ನಿಮಿಷದ ಹಿಂದೆ ಆದ ಘಟನೆ ನನ್ನಿಂದ ಅರಗಿಸಿಕೊಳ್ಳಲು ಆಗ್ಲಿಲ್ಲ.

Source: Google images


ನಾವು ಒಂಬತ್ತನೇ ತರಗತಿಯಲ್ಲಿರುವಾಗ   ಅವರು ನಮ್ಮ ಶಾಲೆಗೇ ಹೊಸತಾಗಿ ಸೇರಿದ್ದರು. ಆ ವರ್ಷ ಅವರೇ ನಮಗೆ ಕನ್ನಡ ಕಲಿಸಲು ಬಂದಿದ್ದರು. ಶಾಲೆ ಬಿಟ್ಟು ಅಂದಿಗೆ ಐದು ವರ್ಷವಾಗಿತ್ತು. ಮಧ್ಯದಲ್ಲಿ  ಒಂದೆರಡು ಬಾರಿ ಶಾಲೆಗೆ  ಭೇಟಿ ಕೊಟ್ಟಿದ್ದೆ. ಆದ್ರೆ ಅವರು ನಂಗೆ ಸಿಕ್ಕಿದ್ದೇ ಇಲ್ಲ. ಶಾಲೆ ಬಿಟ್ಟ ನಂತರ ಮೊದಲ ಬಾರಿ ಅವರನ್ನು ಅಂದು ನೋಡಿದ್ದು . ಅವರಲ್ಲೂ ಸ್ವಲ್ಪ ಬದಲಾವಣೆ ಆದದ್ರಿಂದ  ನನಗೆ  ಅವರ ಪರಿಚಯವಾಗ್ಲಿಲ್ಲ ಎಂದು ನನ್ನನ್ನು ನಾನು ಸಂತೈಸಿದರು ಸಮಾಧಾನವಾಗ್ಲಿಲ್ಲ. ಕಾಲೇಜಿಗೆ ಹೋಗಿ ಪಾಠ ಕೇಳಲು ಮನಸ್ಸಾಗಲಿಲ್ಲ. ಗೆಳೆಯೊರಡನೆ ಹರಟೆ ಹೊಡೆಯಲಾಗಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಕ್ಲಾಸ್ ಬಂಕ್ ಮಾಡಿ ಶಾಲೆಗೆ ಹೋಗಿಬರುವ ಎಂದು ಎನಿಸಿತು. ಆದ್ರೆ ಆವತ್ತೇ ಪ್ರವಾಸದಿಂದ ಹಿಂದೆ ಬಂದಿದ್ದರಿಂದ ರಜೆ ಇರಬಹುದೆಂದು ಸುಮ್ಮನಾದೆ. ಯಾವಾಗ ಮರುದಿನ ಬರುತ್ತದೋ ಎಂದು ಕಾಯುತಿದ್ದೆ. ತಲೆ ತುಂಬಾ ಯಾಕಾದ್ರೂ ಹಾಗೆ  ಮಾಡಿದೆನೋ ಎಂಬ ನೂರಾರು ಆಲೋಚನೆಗಳು. ಮರುದಿನ ಶಾಲೆಗೆ ಹೋಗಿ ಅವರನ್ನು ಸಿಕ್ಕಿಬರುವ ಎಂದು  ನಿರ್ಧರಿಸಿಬಿಟ್ಟೆ.

ಮರುದಿನ ಮಧ್ಯಾಹ್ನ ಆದಂತೆ ಕ್ಲಾಸ್ ಬಂಕ್ ಮಾಡಿ ಶಾಲೆಗೆ ಹೊರಡಿದೆ. ಅವರು ಕಲಿಸಿದ ನೂರಾರು ವಿದ್ಯಾರ್ಥಿಗಳಲ್ಲಿ ಒಬ್ಬಳಾದ  ನನ್ನ ಪರಿಚಯ ಅವರಿಗಾಗಿತ್ತು . ಆದ್ರೆ ನಂಗೆ ಕಲಿಸಿದ ಹತ್ತಿಪ್ಪತ್ತು ಅಧ್ಯಾಪಕರಲ್ಲಿ ಒಬ್ಬರಾದ ಅವರನ್ನು ಗುರುತಿಸುವಲ್ಲಿ ವಿಫಲಳಾದೆ. ಶಾಲೆಯ ಮೈದಾನದಲ್ಲಿ ಕೆಲವು ಮಕ್ಕಳು ಆಡುತ್ತಿದ್ದರು. ಅಲ್ಲೇ ಇದ್ದ ಪಿಟಿ ಮಾಸ್ಟ್ರನ್ನು ಮಾತಾಡಿಸಿ ಅಧ್ಯಾಪಕರೆಲ್ಲ ಕೂರುವ  ಕೊಠಡಿಗೆ ಹೋದೆ. ನಮಗೆ ಕಲಿಸಿದ ಹಲವರನ್ನು ಭೇಟಿಯಾದ್ರು ಇವರು ಅಲ್ಲೂ ಕಾಣಲಿಲ್ಲ. ಅವರು ಪಾಠ ಕಲಿಸಲು ಒಂದು ಕ್ಲಾಸಿಗೆ ಹೋಗಿದ್ದಾರೆ , ಇನ್ನು ಐದು ನಿಮಿಷದಲ್ಲಿ ಬರುವರೆಂದು ಉಳಿದವರು ಹೇಳಿದರು . ಐದು ನಿಮಿಷ ಐದು ಘಂಟೆಯಂತೆ ಕಳೆಯಿತು. ಉಳಿದ ಅಧ್ಯಾಪಕರು ಮಾತಾಡಿಸುತ್ತಿದ್ದರು ನನ್ನ  ಮನಸೆಲ್ಲ ಅವರ ಬರುವಿಕೆಗೆ ಕಾಯುತಿತ್ತು. ಅವರು ಬಂದಂತೆ ಅಲ್ಲಿಗೆ ಹೋಗಿ 'sorry' ಎಂದೆ. ಅವರಿಗೆ ನನ್ಮೇಲೆಯಾದ  ಅಸಮಾಧಾನ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣುತಿತ್ತು. ಆದರು ಒಂದೈದು ನಿಮಿಷ ಮಾತಾಡಿಸಿದ್ರು . ಸ್ವಲ್ಪ ಸಮಾಧಾನವಾದ್ರೂ ಇಂದಿಗೂ ಆ ಘಟನೆ ನೆನಪಿಸಿಕೊಂಡಾಗ ಮನಸ್ಸು ಕೊರಗುತ್ತದೆ .


Comments

Popular posts from this blog

ಹೀಗೆ ಒಂದು ದಿನ ಕನಸಲ್ಲಿ ಕಂಡ ನನ್ನ ಕನಸಿನ ಗುಡಿಸಲು

ಕೃಪೆ : ಗೂಗಲ್ ಇಮೇಜ್ಸ್                       ಮಳೆ ಹನಿಗಳು  ಕಿಟಕಿ ಗಾಜಿಗೆ ಬೀಳುವ ಸದ್ದು ಕೇಳಿ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಅಲ್ಲೇ ಮೇಜಲ್ಲಿಟ್ಟ ಬುದ್ಧನ ಮುಗುಳ್ನಗೆ, ಪಕ್ಕದಲ್ಲಿರುವ ಕೃಷ್ಣಾರ್ಜುನರ  ರಥದ ಮಾದರಿ ಕಂಡರೆ  ಏನೋ ಮನಸ್ಸಿಗೆ ಮುದ ನೀಡುವುದು . ಚಿಕ್ಕಂದಿನಿಂದ ಅವೆರಡನ್ನು ಕೊಳ್ಳುವ ಆಸೆ. ಆದರೆ ಎಲ್ಲಿಯೂ ನನಗೆ ಬೇಕಂತಿರುವುದು ಸಿಕ್ಕಿರಲಿಲ್ಲ. ಕಳೆದ ವರ್ಷ ಉಡುಗೊರೆಯಾಗಿ ಪಡೆದಿದ್ದೆ.  ಪರದೆ ಸರಿಸಿ ಕಿಟಕಿ ಹೊರಗೆ ನೋಡಿದ್ರೆ ನಾ ನೆಟ್ಟ ಗುಲಾಬಿ  ಗಿಡದಲ್ಲಿದ್ದ ಒಂದು ಗುಲಾಬಿ ನನ್ನ ನೋಡಿ ನಕ್ಕಂತೆ ಕಾಣುತಿತ್ತು. ಹೂವೆಂದರೆ  ಪಂಚಪ್ರಾಣ. ಮಲ್ಲಿಗೆಯ ಸುವಾಸನೆ, ಗುಲಾಬಿಯ  ಸೌಂದರ್ಯ ಪದಗಳಲ್ಲಿ  ವರ್ಣಿಸಲು ಅಸಾಧ್ಯ.  ಮಳೆ ಬಿದ್ದಾಗ  ಆ ಮಣ್ಣಿನ ಸುವಾಸನೆ ನನ್ನನ್ನು ಮನೆಯಿಂದ  ಹೊರಬರಲು ಆಹ್ವಾನಿಸಿದಂತಾಯ್ತು. ಎದ್ದು ಛತ್ರಿ ತೆಗೊಂಡು ಹೊರಬಂದು ಹಾಗೆಯೇ ಬರಿಗಾಲಲ್ಲಿ ಅಂಗಳದಲ್ಲಿ ನಿಂತು, ನೀರಿನ ಗುಳ್ಳೆಗಳ ಸಾಲು ನೋಡುತ್ತಾ ನಿಂತು ಬಿಟ್ಟೆ. ಹಾಗೆ ದೃಷ್ಟಿ  ಬಿದ್ದದ್ದು ಹುಲ್ಲಿನ ಮೇಲಿರುವ ಆ ಕೆಂಪು ಕೀಟದ ಮೇಲೆ. ಕೇವಲ ಮಳೆಗಾಲದಲ್ಲಿ ಮಾತ್ರ ನಾ ಆ  ಕೀಟವನ್ನು ಕಂಡಿದ್ದು. ಹೆಸರು ಇನ್ನು ಗೊತ್ತಿಲ್ಲ ಆದ್ರೆ ಮಳೆ ಹನಿಗಳೊಂದಿಗೆ ಅವುಗಳು ಆಕಾಶದಿಂದ ಬೀಳುತ್ತವೆ ಎಂದು ಸಣ್ಣದಿರುವಾಗ ಯಾರೋ ಹೇಳಿದ ನೆನಪು. ಬಲಕ್ಕೆ ತಿರುಗಿದರೆ ನನ್ನ ತರಕಾರಿ ತೋಟ. ಬಾಳೆ, ತೆಂಗು, ಮಾವಿನ ಮರಗಳು ಮಳೆಗೆ ಮೈ ಒಡ್ಡಿ ನಿಂ

ಫೀಸ್ ಜಾಸ್ತಿಯಾಗಲು ಕಾರಣ ಪಾಪದವರು ವಿದ್ಯಾವಂತರಾಗ ಬೇಕೆನ್ನುವುದರಿಂದ ಅಂತೆ !!!

ಅದೊಂದು ಸಮಾರಂಭದಲ್ಲಿ ನನ್ನ ಸುತ್ತಮುತ್ತ  ಕೆಲವು ಹೆಂಗಸರು ಕೂತು ಮಾತಾಡುತ್ತಿದ್ದರು. ಹೆಂಗಸು ೧ : (ಪಕ್ಕದಲ್ಲಿ ಕೂತಿದ್ದ ಹುಡುಗಿಯನ್ನ ) "ಏನಮ್ಮ ಏನ್ ಕಲಿತಿದ್ದೀಯಾ ?" ಹೆಂಗಸು ೨ : "ಅವಳನ್ನ ಇಂಜಿನಿಯರಿಂಗ್ ಗೆ ಸೇರಿಸಿದ್ದೀವಿ. ಇನ್ನು ಮುಂದಿನ ವಾರ ಕ್ಲಾಸ್ಸ್ ಸ್ಟಾರ್ಟ್ ಆಗುತ್ತೆ." ಮಗಳಿಗೆ ಕೇಳಿದ ಪ್ರಶ್ನೆಗೆ ತಾಯಿ ಉತ್ತರಿಸಿದರು. ಮಗಳು ತನ್ನ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಳು. ತನ್ನ ಸುತ್ತಮುತ್ತ ಇರುವ ಜನರನ್ನ ಮಾತಾಡಿಸುವದಕ್ಕಿಂತ ಪೊಕೀಮೋನ್ ಹಿಡಿಯುದರಲ್ಲಿ ಬ್ಯುಸಿ ಆಗಿದ್ದಳು. ಹೆಂಗಸು ೧ : "ಒಹ್! ಹಾಗೇನು .ಅಂದ್ರೆ  ಪಿಯುಸಿ ಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿರ್ಬೇಕಲ್ಲ? ಒಳ್ಳೇದು ." ಹೆಂಗಸು ೨ : "ಇಲ್ಲ ಕಣ್ರೀ . ಫೇಲ್ ಆಗಿದ್ರು ಫೇಲ್ ಆದ್ಲು ಎಂದು ಹೇಳೋಕ್ಕೆ ನಾನು ಸಂಕೋಚ ಪಡ್ತಿರ್ಲಿಲ್ಲ. ಅಷ್ಟು ಕಮ್ಮಿ ಮಾರ್ಕ್ಸ್ ತೆಗ್ದಿದ್ದಾಳೆ ನೋಡಿ. ನಮಗೆ ಅವಳು ಇಂಜಿನಿಯರಿಂಗ್ ಮಾಡಬೇಕೆಂಬುದು ಆಸೆ. ಬಿ ಎಸ್ಸಿ ಎಲ್ಲ ಕಲಿತರೆ ಏನು ಸಿಗ್ತದೆ ಹೇಳಿ. ಹಾಗೆ ಮಂಗಳೂರಲ್ಲೇ ಒಂದು ಕಾಲೇಜು ಗೆ  ಮ್ಯಾನೇಜ್ಮೆಂಟ್ ಸೀಟ್ ಅಲ್ಲಿ ಆರ್ಕಿಟೆಕ್ಚರ್ ಗೆ ಸೇರಿಸಿದ್ದೀವಿ. ಈ ಕೋರ್ಸ್ ಗೆ ಸೇರಿದ್ರೆ ೨ ಸಲ ಟೂರ್ ಗೆ ಹೋಗಬಹುದು ಅಂತ ಅವಳ ಗೆಳೆಯರು ಹೇಳಿದ್ದಾರಂತೆ. " ಹೆಂಗಸು ೧: "ಅದಕ್ಕೇನಂತೆ ಬಿಡಿ. ಇರುವುದು ಒಬ್ಬಳು ಮಗಳು ,  ಕಲೀಲಿ. " ಹೆಂಗಸು ೨: "ಏನೋ ಅವ