![]() |
ಕೃಪೆ : ಗೂಗಲ್ ಇಮೇಜ್ಸ್ |
ಮಳೆ ಬಿದ್ದಾಗ ಆ ಮಣ್ಣಿನ ಸುವಾಸನೆ ನನ್ನನ್ನು ಮನೆಯಿಂದ ಹೊರಬರಲು ಆಹ್ವಾನಿಸಿದಂತಾಯ್ತು. ಎದ್ದು ಛತ್ರಿ ತೆಗೊಂಡು ಹೊರಬಂದು ಹಾಗೆಯೇ ಬರಿಗಾಲಲ್ಲಿ ಅಂಗಳದಲ್ಲಿ ನಿಂತು, ನೀರಿನ ಗುಳ್ಳೆಗಳ ಸಾಲು ನೋಡುತ್ತಾ ನಿಂತು ಬಿಟ್ಟೆ. ಹಾಗೆ ದೃಷ್ಟಿ ಬಿದ್ದದ್ದು ಹುಲ್ಲಿನ ಮೇಲಿರುವ ಆ ಕೆಂಪು ಕೀಟದ ಮೇಲೆ. ಕೇವಲ ಮಳೆಗಾಲದಲ್ಲಿ ಮಾತ್ರ ನಾ ಆ ಕೀಟವನ್ನು ಕಂಡಿದ್ದು. ಹೆಸರು ಇನ್ನು ಗೊತ್ತಿಲ್ಲ ಆದ್ರೆ ಮಳೆ ಹನಿಗಳೊಂದಿಗೆ ಅವುಗಳು ಆಕಾಶದಿಂದ ಬೀಳುತ್ತವೆ ಎಂದು ಸಣ್ಣದಿರುವಾಗ ಯಾರೋ ಹೇಳಿದ ನೆನಪು. ಬಲಕ್ಕೆ ತಿರುಗಿದರೆ ನನ್ನ ತರಕಾರಿ ತೋಟ. ಬಾಳೆ, ತೆಂಗು, ಮಾವಿನ ಮರಗಳು ಮಳೆಗೆ ಮೈ ಒಡ್ಡಿ ನಿಂತಂತೆ ಕಾಣುತಿತ್ತು ಅಂತೆಯೇ ಬಸಳೆ ಗಿಡದ ಬಳ್ಳಿ, ಕುಂಬಳಕಾಯಿಯ ಬಳ್ಳಿಗಳು ತಮ್ಮ ಎಲೆಯಲ್ಲಿ ನೀರು ಶೇಕರಿಸುವಂತಿದ್ದರೆ ಮೊನ್ನೆಯಷ್ಟೇ ನೆಟ್ಟ ಮೆಣಸಿನ ಗಿಡಗಳು ನೀರಿನ ರಭಸಕ್ಕೆ ಮಣ್ಣಲ್ಲಿ ನಿಲ್ಲಲು ಕಷ್ಟಪಡುತಿದ್ದವು. ಹೀಗೆ ಒಂದಡೆ ತರಕಾರಿ ತೋಟವಾದ್ರೆ ಇನ್ನೊಂದು ಬದಿಯಲ್ಲಿ ಮಲ್ಲಿಗೆ, ದಾಸವಾಳ, ಗುಲಾಬಿ ಹೂವುಗಳು ರಾರಾಜಿಸುತ್ತಿದ್ದವು. ಬೇಸಿಗೆಯ ಬೇಗೆಗೆ ಬೆಂದುಹೋದ ಅವುಗಳಿಗೆ ಮಳೆ ಬಂದಾಗ ಆಗಿರುವ ಖುಷಿ ಕಂಡು, ವರ್ಷವಿಡೀ ಸ್ವಲ್ಪ ಹೊತ್ತಾದರೂ ಮಳೆ ಬರಬಾರದೇ ಎಂದು ಎನಿಸಿತು.
ಹಾಗೆ ನಿಂತಿರುವಾಗ ದೂರದ ಗದ್ದೆಯಲ್ಲಿ 'ಹೊ ಹೊ ' ಎಂದು ಕೋಣಗಳಿಗೆ ಹೇಳುವುದು ಕೇಳಿಸುತಿತ್ತು. ಮಳೆ ಹನಿಯ ಸದ್ದೊಂದಿಗೆ, ಪಕ್ಕದಲ್ಲಿರುವ ನದಿ ಹರಿಯುವ ಸದ್ದು ಕಿವಿಗಳಿಗೆ ಬೆಳಗಿನ ಸುಪ್ರಭಾತದಂತಿತ್ತು. ಅಲ್ಲೇ ಪಕ್ಕದಲ್ಲಿರುವ ಬಂಡೆಯ ಮೇಲೆ ದಿನಾ ಸಂಜೆಯಾಗುವಾಗ ಕಾದಂಬರಿಯೊಂದನ್ನು ಹಿಡಿದು ಅಲ್ಲಿ ಕೂರುವುದು ನನ್ನ ದಿನಚರಿ. ಸೂರ್ಯಾಸ್ತವಾಗುವ ಹೊತ್ತಲ್ಲಿ ಕೆಂಪಾದ ಬಾನು ನೋಡಿದರೆ ಕಣ್ಣಿಗೆ ಹಬ್ಬವೇ ಸರಿ. ಇನ್ನೇನು ಬೆಳಗಿನ ತಿಂಡಿ ತಯಾರು ಮಾಡಬೇಕೆಂದು ಯೋಚನೆ ಬಂದಂತೆ ಅಡಿಗೆ ಕೋಣೆಯೊಳಗೆ ಹೊಕ್ಕಿಬಿಟ್ಟೆ. ಬೆಳಗಿನ ತಿಂಡಿ, ಮಧ್ಯಾನ್ಹದ ಅಡಿಗೆ ಮುಗಿಸಿ ಬಂದು ಕೂತರೆ ಮಳೆ ನಿಂತಿತ್ತು. ದಿನಚರಿಯಂತೆ ಹಾಡುಗಳನ್ನು ಕೇಳುತ್ತ ಸೂಜಿ ದಾರದೊಂದಿಗೆ , ಇತೀಚೆಗೆ ಕೊಂಡ ಹಳದಿ ಸೀರೆ ಮೇಲೆ ಕಸೂತಿ ಮಾಡಲು ಶುರು ಮಾಡಿದೆ.
ಹೊತ್ತೆಷ್ಟಾಯ್ತೆಂದು ಗಡಿಯಾರದತ್ತ ನೋಡಿದರೆ ಗಂಟೆ ಐದಾಗಿತ್ತು. ಇನ್ನೇನು ಇವರು ಬರುವ ಹೊತ್ತಾಯ್ತೆಂದುಕೊಂಡು, ಒಂದು ತಟ್ಟೆ ತೆಗೊಂಡು ಹೊರಗೆ ಹೋಗಿ ಮಲ್ಲಿಗೆ ಕೊಯ್ದು ಮಾವಿನ ಮರದಲ್ಲಿ ನೇತಾಡುತಿದ್ದ ಜೋಕಾಲಿ ಮೇಲೆ ಕೂತು ಅವರ ನಿರೀಕ್ಷೆಯಲ್ಲಿ ಮಲ್ಲಿಗೆ ಕಟ್ಟುತ್ತಾ, ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಿದ್ದರೆ ಅಲಾರ್ಮ್ ಸದ್ದು ಕೇಳಿ ವಾಸ್ತವಕ್ಕೆ ಇಳಿದುಬಿಟ್ಟೆ. ಗಂಟೆ ಬೆಳಗ್ಗೆ ಐದಾಗಿತ್ತು. ಪಕ್ಕದಲ್ಲಿ ಗೆಳತಿ ಮಲಗಿದ್ದಳು. ನನ್ನ ಕನಸಿನ ಗುಡಿಸಲಲ್ಲಿ ನಾನು ಇಲ್ಲವೆಂಬುದು ಅರಿವಾಯ್ತು. ಹಿಂದಿನ ರಾತ್ರಿ ಅವನ ಮೆಸೇಜಿನ ನಿರೀಕ್ಷಯಲ್ಲಿ ಮಲಗಿದ್ದೆ ಎಂಬ ನೆನಪಾಗಿ ವಾಟ್ಸಪ್ಪ್ ಓಪನ್ ಮಾಡಿದರೆ ಒಂದು ಮೆಸೇಜು ಬಂದಿರಲಿಲ್ಲ. ನಾನೇ ಶುಭೋಧಯ ಎಂದು ಸೆಂಡ್ ಮಾಡಿ ವಾಸ್ತವದ ದಿನಚರಿಗೆ ಮಂಚದಿಂದ ಎದ್ದು ಸಜ್ಜಾದೆ.
Loved the attention to detail!!Every single element of this beautiful nature has been described amazingly by you 😊 Loved the concept of 'Kanasina Gudisalu'. Simplicity at its best!!👏 Waiting for your next post!! 😊😊
ReplyDeleteThank you Ananya :)
DeleteLiked this one. ನಾನು observe ಮಾಡಿದ ಹಾಗೆ ಈ ಫ್ಯಾನ್ಸಿ ಕನಸುಗಳು ರಾತ್ರಿ ಮಲಗಿದಾಗ ಬೀಳುವಂತಹ ಕನಸಲ್ಲ. ಕೆಲವೊಮ್ಮೆ ಮದ್ಯಾಹ್ನವೋ ಅಪರಾಹ್ನವೋ ಮಲಗಿದಾಗ, ಸಣ್ಣ ನಿದ್ದೆಯಲ್ಲಿ ಬೀಳುತ್ತವೆ.ಅಂತಹ ಸಮಯದಲ್ಲೂ ಹೊರಗೆ ನಿಜವಾಗಿಯೂ ಮಳೆ ಬೀಳುತ್ತಿದ್ದರೆ, ಕನಸಲ್ಲೂ ಮಳೆ! Kanasalli agiddu swalpaa reality link agirutte. Chanda
ReplyDeleteಹೌದು ಅದೂ ಸರಿ.. ☺ ಧನ್ಯವಾದಗಳು 😊💐
Delete