Skip to main content

ಎಮರ್ಜೆನ್ಸಿ ಕಾಂಟ್ಯಾಕ್ಟ್ಸ್

ಮಹಿಳಾ ದಿನಾಚರಣೆ !
 ವಾಟ್ಸಪ್ಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಎಲ್ಲಿ ನೋಡಿದರು ಹೆಣ್ಣಿನ ಜೀವನ, ಅವಳ  ತ್ಯಾಗ, ತಾಳ್ಮೆ, ನೋವಿನ ಬಗ್ಗೆಯೇ ತುಂಬಿ ತುಳುಕುತ್ತಿದೆ. ವಿಶ್ ಮಾಡಿದವರಿಗೆ ರಿಪ್ಲೈ ಮಾಡಿ, ಮಹಿಳಾ ದಿನಾಚರಣೆ ಆಚರಿಸುವುದು ಸರಿಯೋ ತಪ್ಪೋ ಎಂದು ಮನದಲ್ಲೇ ಚರ್ಚಿಸುತ್ತ ಆಫೀಸಿಗೆಂದು ಹೊರಟೆ. ಆಫೀಸ್ ಗೇಟ್ ಅಲ್ಲಿ ಸೆಕ್ಯೂರಿಟಿ ಗಾರ್ಡ್ಸ್ ಮುಗುಳ್ನಗುತ್ತ "ಹ್ಯಾಪಿ ವುಮೆನ್ಸ್ ಡೇ" ಎಂದು ವಿಶ್ ಮಾಡಿ ಒಂದು ಬ್ಯಾಡ್ಜ್ ಕೈಗಿತ್ತರು. ಒಂದು ಕಡೆಯಲ್ಲಿ ಹೆಣ್ಣಿನ ಚಿತ್ರವಿದ್ದರೆ  ಇನ್ನೊಂದು ಕಡೆಯಲ್ಲಿ "ಎಮರ್ಜೆನ್ಸಿ ಕಾಂಟ್ಯಾಕ್ಟ್ಸ್ " ಇದ್ವು. ಅದು ಮಹಿಳಾ ದಿನಾಚರಣೆಗೆ ಸಿಕ್ಕಿದ ಗಿಫ್ಟ್ ಆಗಿತ್ತು. ಅಯ್ಯೋ ಇಷ್ಟೇನಾ ಎಂದುಕೊಂಡೆ, ಆದರು ಎಲ್ಲೊ ಮನದಲ್ಲಿ ಇದೆ ಇಂದಿನ ದಿನಗಳಲ್ಲಿ ಬಲು ಅವಶ್ಯವಾದದು ಎಂದೆನಿಸಿತು.

ಒಂದು ಕೋಣೆಯಲ್ಲಿ ಒಬ್ಬಳು ಇರಲು ಹೆದರುತ್ತಿದ್ದವಳು ನಾನು. ಎಲ್ಲಿ ಕರೆಂಟ್ ಹೋಗಿ ಕತ್ತಲೆ ಯಲ್ಲಿ ಭೂತ ಕಾಣಿಸುವುದೋ ಎಂಬ ಭಯ. ಇನ್ನೊಂದು ಕೋಣೆ ಯ ದೀಪ ಆರಿಸಿ ಬಾ ಎಂದು ಅಮ್ಮ ಹೇಳಿದರೆ ನನ್ನಿಂದ ಆಗದು ಎನ್ನುತ್ತಿದ್ದೆ. ಆದರೆ ಇಂದು ಜನರಿಂದ ತುಂಬಿ ತುಳುಕುತ್ತಿರುವ ಜಾಗದಲ್ಲಿದ್ದರು ಹಗಲಲ್ಲೂ ಹೆದರಿಕೆ. ಭೂತದಲ್ಲ ಮನುಷ್ಯರದು. ಮುಂಚೆ ರಸ್ತೆ ದಾಟುವಾಗ ಜಾಗೃತೆ ಎಂದು ಹೇಳಿ ಕಳುಹಿಸುತ್ತಿದ್ದರು ಅಮ್ಮ , ಇಂದು ರೋಡ್ ದಾಟಿ ಅಪಾರ್ಟ್ಮೆಂಟ್  ಗೇಟ್ ಒಳಗಿದ್ದೇನೆ ಎಂದರು ಅಮ್ಮ, ಮನೆ ತಲುಪಿದ ಕೂಡಲೇ ಕಾಲ್ ಮಾಡು ಎನ್ನುವರು.  ದಾರಿಯಲ್ಲಿ ಯಾವ ಕಾಮ ಪಿಶಾಚಿ ಯ ಕೈಗೆ ತನ್ನ ಮಗಳು ಬಲಿಯಾಗುವಳೋ ಎಂಬ ಭಯ ಎಲ್ಲ ಹೆತ್ತವರಿಗೆ  ಕಾಡುತ್ತಿದೆ. ದಿನಪತ್ರಿಕೆ ತೆರೆದರೆ  ಅತ್ಯಾಚಾರಗಳ ಸುದ್ದಿಗಳೇ ತುಂಬಿ ಹೋಗಿದೆ. ಒಂದು ತಿಂಗಳ ಮಗುವಿನಿಂದ  ಹಿಡಿದು ತೊಂಬತ್ತು ವರ್ಷದ ಮುದುಕಿಯ ಮೇಲು ಇಂದು ದೌರ್ಜನ್ಯ ನಡೆಯುತ್ತಿದೆ. ಯಾವ ಹೆಣ್ಣನ್ನು ಕೇಳಿದರು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಿರುಕಳವನ್ನು ಅನುಭವಿಸಿರುವುದು  ಕಟು ಸತ್ಯ.

ಇಂತಹ ಒಂದು ಅನುಭವ ಒಂದು ವರ್ಷದ ಹಿಂದೆ ನಡೆದಿದ್ದರೂ ಇಂದೂ ಹಚ್ಚ ಹೆಸರಾಗಿಯೇ ಮನದಲ್ಲಿ ನೆಲೆಯಾಗಿದೆ. ಪುಣೆ ಗೆ ಬಂದ ಮೊದಲ ವಾರವಾಗಿತ್ತು. ಗೆಳತಿಯ ಸಂಭಂದಿಕರೊಬ್ಬರನ್ನು  ಭೇಟಿಯಾಗಲೆಂದು ಸಂಜೆ ಆಫೀಸಿಂದ ಕ್ಯಾಬ್ ಅಲ್ಲಿ ಹೊರಟಿದ್ದೆವು. ಸ್ವಲ್ಪ ಕತ್ತಲೆ ಯಾದರಿಂದ ಕ್ಯಾಬಿಗಿಂತ ಬಸ್ಸಲ್ಲಿ ಬರುವುದು ಒಳಿತೆಂದು ಮುಖ್ಯ ಬಸ್ ನಿಲ್ದಾಣದಲ್ಲಿ ನಿಂತಿದ್ದೆವು. ಅಲ್ಲಿ ಸ್ವಲ್ಪ ಜನ ಸಂದಣಿ ಕಮ್ಮಿ ಇದ್ರಿಂದ ಬಸ್ ಟಿಕೆಟ್  ಆಫೀಸ್ ಬಳಿಯಲ್ಲಿ ನಿಲ್ಲುವುದು ಒಳಿತೆಂದು ಅಲ್ಲಿ ಹೋಗಿ ನಿಂತೆವು. ಅಷ್ಟರಲ್ಲಿ ನನ್ನ ಕಿವಿ ಹತ್ತಿರ ಯಾರೋ ಹಾಡು ಹೇಳಿದಂತಾಗಿ ತಿರುಗಿ ನೋಡಿದರೆ ಅವನು ಪಕ್ಕದಲ್ಲೇ ನಿಂತಿದ್ದ. ಮೈಯಲ್ಲಿ ಖಾಖಿ ಧರಿಸಿದ್ದರು  ಅವನ ದೃಷ್ಟಿ ಮಾತ್ರ ನೀಚವಾಗಿತ್ತು. ಆ ವಿಚಿತ್ರ ನಗು, ಆ ದೃಷ್ಟಿ ಅಷ್ಟು ಹತ್ತಿರದಲ್ಲಿ  ನೋಡಿ  ಒಂದು ಘಳಿಗೆ ಭೂಮಿ ಕುಸಿದಂತಾಗಿತ್ತು. ಗೆಳತಿಯೂ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದಳು. ಎರಡು ಕಡೆಯಿಂದಲೂ ವಾಹನಗಳು ಬರುತಿದ್ದರು ಅದರ ಪರಿವೆಯಿಲ್ಲದೆ ಇಬ್ಬರು ರಸ್ತೆ ದಾಟಿ ಇನ್ನೊಂದು ಕಡೆಗೆ ಹೋಗಿ ನಿಂತುಬಿಟ್ವಿ. ಏನು ಮಾಡಬೇಕೆಂದು ತೋಚಲಿಲ್ಲ. ಆಚೆ ಬದಿಯಿಂದ ನಮ್ಮನ್ನು ತಿನ್ನುವಂತೆ ನೋಡುತಿದ್ದ. ಕ್ಯಾಬ್ ಬುಕ್ ಮಾಡಿ ಅಲ್ಲಿಂದ ವಾಪಸ್ ಬಂದ್ವಿ. ಅಷ್ಟೇನೂ ದೊಡ್ಡದು ಆಗದಿದ್ದರು ಎಲ್ಲಿಯೋ ಆ ಘಟನೆ ನೆನಪಿಸಿದರೆ ಇಂದೂ ಮೈ ನಡುಗುತ್ತೆ. ರಾತ್ರಿಯೆಲ್ಲ ಮುಂಚೆ ಭೂತದ ಕನಸು ಬಿದ್ದರೆ ಇಂದು ಯಾರೋ ಅಟ್ಟಿಸಿ ಬಂದಂತಾಗಿ ಎಷ್ಟೋ ಸಲ ನಿದ್ದೆಯಿಂದ  ಗಾಬರಿಯಲ್ಲಿ ಎದ್ದಿರುವುದಿದೆ.

ಹುಡುಗಿಯರು ಆದಷ್ಟು ತಗ್ಗಿ ಬಗ್ಗಿ ನಡೆಯಬೇಕು, ಹುಡುಗರನ್ನು ಮರಳು ಗೊಳಿಸುವಂತಹ ಬಟ್ಟೆಯನ್ನು ಹಾಕಬಾರದು, ಜಾಸ್ತಿಯಾಗಿ ಜನಸಂದಣಿಯಲ್ಲಿ ಓಡಾಡಬೇಕು ಎಂದು ಎಲ್ಲರೂ ಹೇಳುವರು.ಸಣ್ಣ ವಿಷಯಾನೇ ಇರಲಿ ಯಾರಾದರೂ ಅಷ್ಲೀಲವಾಗಿ ವರ್ತಿಸಿದರೆ ಪೊಲೀಸ್ ಕಂಪ್ಲೇಂಟ್ ಕೊಡಬೇಕೆಂದೆನ್ನುತ್ತಾರೆ. ಆದರೆ   ಖಾಖಿ ಧರಿಸಿ ರಕ್ಷಣೆಗೆಂದು ನಿಂತವನೇ ಭಕಾಸುರನಾದರೆ ಇನ್ನು ಯಾರನ್ನು ನಂಬಲು ಸಾಧ್ಯ. ಜನರಿಂದ ತುಂಬಿ ತುಳುಕುತ್ತಿರುವ ಬಸ್ಸಿನಲ್ಲೂ ಮೈಗೆ ಕೈ ಹಾಕುವವರಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಹುಡುಗಿಯರ ಭಾವಚಿತ್ರವನ್ನು ತಮ್ಮ ಲೈಂಗಿಕ ತೃಪ್ತಿಗಾಗಿ  ದುರುಪಯೋಗ ಪಡಿಸುವವರು ಇದ್ದಾರೆ.

ಇದೆಂದ ಮಾತ್ರಕ್ಕೆ ಇಡೀ ಗಂಡು ಕುಲವನ್ನೇ ದೂಷಿಸುವುದೂ ಸರಿಯಲ್ಲ. ಸರ್ಕಾರ ಕೊಟ್ಟಿರುವ ಸ್ತ್ರೀ ಹಕ್ಕುಗಳನ್ನು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಮಾಡುವವರು ತುಂಬಾ ಮಹಿಳೆಯರನ್ನು ಕಾಣುತ್ತೇವೆ. ಹೆಣ್ಣಿಗೆ ಅನ್ಯಾಯ ಮಾಡಿದವನಿಗೂ , ನಿರ್ದೋಷಿಯಾದ ಗಂಡಿನ ಮೇಲೆ ಆರೋಪ ಹೊರಿಸುವ ಹೆಣ್ಣಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಹೆಣ್ಣಾಗಲಿ , ಗಂಡಾಗಲಿ ಒಬ್ಬರು ಇನ್ನೊಬರಿಗಿಂತ ಶ್ರೇಷ್ಠ ಎನ್ನುವುದಕ್ಕಿಂತ  ಒಬ್ಬರನ್ನೊಬ್ಬರು  ಗೌರವದಿಂದ ಕಾಣಲು ಕಲಿಯೋಣ.


Comments

Post a Comment

Popular posts from this blog

ಕ್ಷಮಿಸಿ ಟೀಚರ್ ...!

ಆವತ್ತು ಎಂದಿನಂತೆ ಕಾಲೇಜಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ಅದು ಯಾವತ್ತೂ ಮರೆಯದ ದಿನವಾಗುತ್ತದೆಂದು ಕನಸಲ್ಲೂ ಎಣಿಸಿರಲಿಲ್ಲ . ತಪ್ಪು ಎನ್ನುವುದಕ್ಕಿಂತ ಏನೋ ಪಾಪ ಮಾಡಿದ್ದೇನೆ ಎಂಬ ಭೀತಿ ಇಂದಿಗೂ ನನ್ನನ್ನು ಕಾಡುತ್ತಿದೆ. ನನ್ಮುಂದೆ ಬಸ್ಸೊಂದು ನಿಂತಿತ್ತು. ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟಿರುವುದೆಂದು ಬಸ್ಸು ನೋಡಿದಾಗ  ತಿಳಿಯಿತು. ನಾನೋ ಇದನೆಲ್ಲ ನೋಡುತಿದ್ದರು ನನ್ನ ಮನಸ್ಸು ಏನೋ ಬೇರೆ ಕಡೆಯೇ ತೇಲಿದಂತ ಅನುಭವ. ಆ ಬಸ್ಸಿನ ಕಿಟಕಿಯಿಂದ  ಸುಮಾರು ಇಪ್ಪತೆಂಟು ಮೂವತ್ತು ವರ್ಷದ ಹುಡುಗಿಯೊಬ್ಬಳು ನನ್ನ ಕಡೆ ನೋಡಿ ಕೈ ಬೀಸಿದಂತೆ ಆಯ್ತು. ಆದರೆ ಯಾರೆಂಬುದು ನನಗೆ ತಿಳಿಯಲೇ ಇಲ್ಲ. ನನ್ನ ನೋಡಿ ಕೈ ಬೀಸಿದಳೋ ಅಲ್ಲ ಪಕ್ಕದಲ್ಲಿರುವವರಿಗೆ ಸನ್ನೆ ಮಾಡುತಿದ್ದಳೊ ತಿಳಿಯಲಿಲ್ಲ.ಆಚೆ ಈಚೆ ನೋಡಿದರೆ ಯಾರು ಅವಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಮತ್ತೆ ಅವಳು ನನ್ನನ್ನೇ ನೋಡ್ತಿದಂತೆ ಅನಿಸಿತು. ಏನು ಯೋಚಿಸುತಿದ್ದೆನೋ ದೇವರಿಗೆ ಗೊತ್ತು. ನಾನು ಅವಳಿಗೆ ಪ್ರತಿಕ್ರಿಯಿಸಲೇ  ಇಲ್ಲ. ನಾನು ಅವಳಿಗೆ ಕೈ ಬೀಸುತಿದ್ದರೆ  ನನ್ನ ಗಂಟೇನು  ಹೋಗುತಿತ್ತು ಎಂದು ಇವತ್ತಿನವರೆಗೂ  ನನ್ನನು ನಾನು ಎಷ್ಟು ಬಾರಿ ಬೈದುಕೊಂಡಿದ್ದೇನೋ ಏನೋ. ಸ್ವಲ್ಪ ಹೊತ್ತಾದ ನಂತರ ಯಾರೋ ಬಸ್ಸಿನಿಂದ ಇಳಿದಂತಾಯ್ತು.  ಇಳಿದವಳನ್ನು ನೋಡಿ ಅವಾಕ್ಕಾದೆ . ನಾನು ಕಲಿತ ಶಾಲೆಯಲ್ಲೇ ನನ್ನ ಕಸಿನ್ ಓದುತ್ತಿದ್ದಳು . ಅವಳು ಬಸ್ಸಿನಿಂದ ಇಳಿದಂತೆ ಕಿಟಕಿ ಬದಿಯಲ್ಲಿದ್ದ

ಹೀಗೆ ಒಂದು ದಿನ ಕನಸಲ್ಲಿ ಕಂಡ ನನ್ನ ಕನಸಿನ ಗುಡಿಸಲು

ಕೃಪೆ : ಗೂಗಲ್ ಇಮೇಜ್ಸ್                       ಮಳೆ ಹನಿಗಳು  ಕಿಟಕಿ ಗಾಜಿಗೆ ಬೀಳುವ ಸದ್ದು ಕೇಳಿ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಅಲ್ಲೇ ಮೇಜಲ್ಲಿಟ್ಟ ಬುದ್ಧನ ಮುಗುಳ್ನಗೆ, ಪಕ್ಕದಲ್ಲಿರುವ ಕೃಷ್ಣಾರ್ಜುನರ  ರಥದ ಮಾದರಿ ಕಂಡರೆ  ಏನೋ ಮನಸ್ಸಿಗೆ ಮುದ ನೀಡುವುದು . ಚಿಕ್ಕಂದಿನಿಂದ ಅವೆರಡನ್ನು ಕೊಳ್ಳುವ ಆಸೆ. ಆದರೆ ಎಲ್ಲಿಯೂ ನನಗೆ ಬೇಕಂತಿರುವುದು ಸಿಕ್ಕಿರಲಿಲ್ಲ. ಕಳೆದ ವರ್ಷ ಉಡುಗೊರೆಯಾಗಿ ಪಡೆದಿದ್ದೆ.  ಪರದೆ ಸರಿಸಿ ಕಿಟಕಿ ಹೊರಗೆ ನೋಡಿದ್ರೆ ನಾ ನೆಟ್ಟ ಗುಲಾಬಿ  ಗಿಡದಲ್ಲಿದ್ದ ಒಂದು ಗುಲಾಬಿ ನನ್ನ ನೋಡಿ ನಕ್ಕಂತೆ ಕಾಣುತಿತ್ತು. ಹೂವೆಂದರೆ  ಪಂಚಪ್ರಾಣ. ಮಲ್ಲಿಗೆಯ ಸುವಾಸನೆ, ಗುಲಾಬಿಯ  ಸೌಂದರ್ಯ ಪದಗಳಲ್ಲಿ  ವರ್ಣಿಸಲು ಅಸಾಧ್ಯ.  ಮಳೆ ಬಿದ್ದಾಗ  ಆ ಮಣ್ಣಿನ ಸುವಾಸನೆ ನನ್ನನ್ನು ಮನೆಯಿಂದ  ಹೊರಬರಲು ಆಹ್ವಾನಿಸಿದಂತಾಯ್ತು. ಎದ್ದು ಛತ್ರಿ ತೆಗೊಂಡು ಹೊರಬಂದು ಹಾಗೆಯೇ ಬರಿಗಾಲಲ್ಲಿ ಅಂಗಳದಲ್ಲಿ ನಿಂತು, ನೀರಿನ ಗುಳ್ಳೆಗಳ ಸಾಲು ನೋಡುತ್ತಾ ನಿಂತು ಬಿಟ್ಟೆ. ಹಾಗೆ ದೃಷ್ಟಿ  ಬಿದ್ದದ್ದು ಹುಲ್ಲಿನ ಮೇಲಿರುವ ಆ ಕೆಂಪು ಕೀಟದ ಮೇಲೆ. ಕೇವಲ ಮಳೆಗಾಲದಲ್ಲಿ ಮಾತ್ರ ನಾ ಆ  ಕೀಟವನ್ನು ಕಂಡಿದ್ದು. ಹೆಸರು ಇನ್ನು ಗೊತ್ತಿಲ್ಲ ಆದ್ರೆ ಮಳೆ ಹನಿಗಳೊಂದಿಗೆ ಅವುಗಳು ಆಕಾಶದಿಂದ ಬೀಳುತ್ತವೆ ಎಂದು ಸಣ್ಣದಿರುವಾಗ ಯಾರೋ ಹೇಳಿದ ನೆನಪು. ಬಲಕ್ಕೆ ತಿರುಗಿದರೆ ನನ್ನ ತರಕಾರಿ ತೋಟ. ಬಾಳೆ, ತೆಂಗು, ಮಾವಿನ ಮರಗಳು ಮಳೆಗೆ ಮೈ ಒಡ್ಡಿ ನಿಂ

ಫೀಸ್ ಜಾಸ್ತಿಯಾಗಲು ಕಾರಣ ಪಾಪದವರು ವಿದ್ಯಾವಂತರಾಗ ಬೇಕೆನ್ನುವುದರಿಂದ ಅಂತೆ !!!

ಅದೊಂದು ಸಮಾರಂಭದಲ್ಲಿ ನನ್ನ ಸುತ್ತಮುತ್ತ  ಕೆಲವು ಹೆಂಗಸರು ಕೂತು ಮಾತಾಡುತ್ತಿದ್ದರು. ಹೆಂಗಸು ೧ : (ಪಕ್ಕದಲ್ಲಿ ಕೂತಿದ್ದ ಹುಡುಗಿಯನ್ನ ) "ಏನಮ್ಮ ಏನ್ ಕಲಿತಿದ್ದೀಯಾ ?" ಹೆಂಗಸು ೨ : "ಅವಳನ್ನ ಇಂಜಿನಿಯರಿಂಗ್ ಗೆ ಸೇರಿಸಿದ್ದೀವಿ. ಇನ್ನು ಮುಂದಿನ ವಾರ ಕ್ಲಾಸ್ಸ್ ಸ್ಟಾರ್ಟ್ ಆಗುತ್ತೆ." ಮಗಳಿಗೆ ಕೇಳಿದ ಪ್ರಶ್ನೆಗೆ ತಾಯಿ ಉತ್ತರಿಸಿದರು. ಮಗಳು ತನ್ನ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಳು. ತನ್ನ ಸುತ್ತಮುತ್ತ ಇರುವ ಜನರನ್ನ ಮಾತಾಡಿಸುವದಕ್ಕಿಂತ ಪೊಕೀಮೋನ್ ಹಿಡಿಯುದರಲ್ಲಿ ಬ್ಯುಸಿ ಆಗಿದ್ದಳು. ಹೆಂಗಸು ೧ : "ಒಹ್! ಹಾಗೇನು .ಅಂದ್ರೆ  ಪಿಯುಸಿ ಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿರ್ಬೇಕಲ್ಲ? ಒಳ್ಳೇದು ." ಹೆಂಗಸು ೨ : "ಇಲ್ಲ ಕಣ್ರೀ . ಫೇಲ್ ಆಗಿದ್ರು ಫೇಲ್ ಆದ್ಲು ಎಂದು ಹೇಳೋಕ್ಕೆ ನಾನು ಸಂಕೋಚ ಪಡ್ತಿರ್ಲಿಲ್ಲ. ಅಷ್ಟು ಕಮ್ಮಿ ಮಾರ್ಕ್ಸ್ ತೆಗ್ದಿದ್ದಾಳೆ ನೋಡಿ. ನಮಗೆ ಅವಳು ಇಂಜಿನಿಯರಿಂಗ್ ಮಾಡಬೇಕೆಂಬುದು ಆಸೆ. ಬಿ ಎಸ್ಸಿ ಎಲ್ಲ ಕಲಿತರೆ ಏನು ಸಿಗ್ತದೆ ಹೇಳಿ. ಹಾಗೆ ಮಂಗಳೂರಲ್ಲೇ ಒಂದು ಕಾಲೇಜು ಗೆ  ಮ್ಯಾನೇಜ್ಮೆಂಟ್ ಸೀಟ್ ಅಲ್ಲಿ ಆರ್ಕಿಟೆಕ್ಚರ್ ಗೆ ಸೇರಿಸಿದ್ದೀವಿ. ಈ ಕೋರ್ಸ್ ಗೆ ಸೇರಿದ್ರೆ ೨ ಸಲ ಟೂರ್ ಗೆ ಹೋಗಬಹುದು ಅಂತ ಅವಳ ಗೆಳೆಯರು ಹೇಳಿದ್ದಾರಂತೆ. " ಹೆಂಗಸು ೧: "ಅದಕ್ಕೇನಂತೆ ಬಿಡಿ. ಇರುವುದು ಒಬ್ಬಳು ಮಗಳು ,  ಕಲೀಲಿ. " ಹೆಂಗಸು ೨: "ಏನೋ ಅವ