Skip to main content


ಬೇಸಿಗೆ ರಜೆ ಬಂತೆಂದರೆ ಸಾಕು ಎಂದು ಎಲ್ಲರೂ ಕಾಯುತಿದ್ದರೆ, ನಾನು ರಜೆ ಸಿಕ್ಕರೆ ಶಾಲೆ ಶುರುವಾಗಲು ಕಾಯುತಿದ್ದೆ. ಶಾಲೆಗೆ ಹೋದರೆ ಒಂದು ಘಂಟೆಯಾದ್ರೂ ಆಡಲು ಅವಕಾಶ ಇತ್ತು. ಈಗ ದೊಡ್ಡವಳಾದ್ರಿಂದ ಮನೆಯಲ್ಲಿ ಕುಣಿದು ಕುಪ್ಪಳಿಸಿ ಆಡಲು ಅವಕಾಶವಿರಲಿಲ್ಲ. ಹುಡುಗಿ ದೊಡ್ಡವಳಾದ ಮೇಲು , ಹೊರಗೆ ಹೋಗಿ ಆಡಿದ್ರೆ ಊರಿನವರು ಏನು ಹೇಳಿಯಾರು ಎಂಬ ಭಯ.  ಬೆಳಿಗ್ಗೆಯಾದ್ರೆ ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಿಯಾದ್ರು ಸಮಯ ಹೋಗುತಿತ್ತು. ಮಧ್ಯಾಹ್ನ ಅಮ್ಮ ಮಲಗಿದ್ರೆ ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ಮನೆಯಲ್ಲಿ ಕೂರಲು ಬೇಜಾರು. ಇದ್ದ ಕಥೆ ಪುಸ್ತಕಗಳನ್ನೆಲ್ಲ  ಆಗಲೇ ಮೂರ್ನಾಲ್ಕು ಸಲ ಓದಿ ಆಗಿರುತ್ತಿತ್ತು. ಏನು ಮಾಡಬೇಕೆಂದು ತೋಚದಿದ್ದಾಗ , ಕಾಣಿಸಿದ್ದು ವಿವಾಹದ ಆಮಂತ್ರಣ ಪತ್ರಿಕೆಗಳು ಹಾಗು ಹಳೆ ಪುಸ್ತಕಗಳ ರಟ್ಟುಗಳು. ವಿವಿಧ ಶೈಲಿಗಳ ಆಮಂತ್ರಣ ಪತ್ರಿಕೆಗಳನ್ನು ಒಟ್ಟು ಹಾಕಿ, ಅವುಗಳನ್ನು ಕತ್ತರಿಸುತ್ತಾ ಏನಾದ್ರು ಒಂದು ಮಾಡಿ ಸಮಯ ಕಳೆಯುತ್ತಿದ್ದೆ. ಅಮ್ಮ ನಿದ್ದೆ ಯಿಂದ ಎದ್ದ ಕೂಡಲೇ, ಇನ್ನು ಮದುವೆ ಸಮಾರಂಭ ಮುಗಿಯದ ಪತ್ರಿಕೆಗಳನ್ನು ಹರಿದಿದಕ್ಕೆ ಬೈಗುಳ ತಿನ್ನುವುದು ರೂಢಿಯಾಗಿತ್ತು.

ಹೀಗೆ ಸಣ್ಣ ಪುಟ್ಟ ಕರಕೌಶಲಗಳನ್ನು ಮಾಡುತ್ತಾ, ಕತೆ ಪುಸ್ತಕ ಓದುತ್ತ, ಹಳೆ ಬುಕ್ಕುಗಳ ರಟ್ಟು ಹಿಡ್ಕೊಂಡು ಕಂಪ್ಯೂಟರ್ ಮಾಡುತ್ತಾ, ಹಿಂದಿನ ತರಗತಿಯ ಪುಸ್ತಕಗಳಲ್ಲಿ ಇದ್ದ ಚಿತ್ರಗಳನ್ನು ಕತ್ತರಿಸಿ ಒಂದು ಪುಸ್ತಕದಲ್ಲಿ ಅಂಟಿಸುತ್ತಾ  ನನಗೆ ಮುಂಚೆ ಬೋರಿಂಗ್  ಎನಿಸುತ್ತಿದ್ದ  ಬೇಸಿಗೆ ರಜೆ ಮನೋರಂಜಕವಾಗಿ ಕಳೆಯುತಿತ್ತು.

 ಕಾಲೇಜಿನ  ಮೆಟ್ಟಿಲು ಹತ್ತಿದಂತೆ ಮೊಬೈಲ್, ಲ್ಯಾಪ್ಟಾಪ್ ಕೈಗೆ ಸಿಕ್ಕಿತು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾನು ಹಿಂದೆ ಉಳಿಯಬಾರದೆಂದು, ಜಾಲತಾಣ ದಲ್ಲಿ ಇದ್ದ ಕೋರ್ಸ್ ಗಳಿಗೆ ಸೇರುತ್ತಾ ಕಾಲ ಕಳೆಯುವುದು ಅಭ್ಯಾಸವಾಯ್ತು. ಕಾಲೇಜು ಶುರುವಾದ್ರೆ ಎಕ್ಸಾಮ್ಸ್ , ಅಸೈನ್ಮೆಂಟ್ಸ್ ಹಿಂದೆ ಓಡುತಿದ್ದರೆ, ಬೇಸಿಗೆ ರಜದಲ್ಲಿ ಕೋರ್ಸ್ ಗಳ ಹಿಂದೆ ಓಡುವುದೇ ಜೀವನವಾಯ್ತು. ಕೆಲಸಕ್ಕೆ ಸೇರಿದ ಮೇಲೆ, ಈಗ ಒಂದು ದಿನ ರಜೆ ಸಿಕ್ಕರೂ, ಇಡೀ ದಿನ ಗೆಳೆಯರೊಡನೆ ಹೊರಗೆ ಸುತ್ತಲೂ ಹೋಗುವುದು, ಸಿನಮಾ ನೋಡುವುದು, ಸಾಮಾಜಿಕ ಜಾಲ ತಾಣಗಳಲ್ಲಿ ಸಮಯ ಕಳೆಯುವುದು ಹೀಗೆ ೨೪ ಘಂಟೆ ನನ್ನನ್ನು ನಾನು ತೊಡಗಿಸಿಕೊಂಡರು ಏನೋ ಒಂದು ಬೇಜಾರು. ಏನೋ ಕಳೆದು ಕೊಂಡಿದ್ದೇನೆ ಎಂಬ ಭಾವ. ಜೀವನ ಬೇಸರವೆನಿಸುತ್ತದೆ.

ಮುಂಚೆ ಮಧ್ಯಾಹ್ನ ಮಲಗಿ ಸ್ವಲ್ಪ ಹೊತ್ತು ಸಮಯ ಕಳೆಯಲಿ ಎಂದು ಮಲಗಿದ್ರು ನಿದ್ದೆ ಹತ್ತುತ್ತಿರಲಿಲ್ಲ. ಏನಾದ್ರು ಮಾಡುವ ಎಂಬ ಯೋಚನೆಗಳು. ಈಗ ಮಾಡಲು ಸುಮಾರು ಕೆಲಸವಿದ್ದರೂ ಮಧ್ಯಾಹ್ನ ನಿದ್ರಾದೇವಿ ಆವರಿಸುತ್ತಾಳೆ.

ಒಂದು ಕ್ಷಣ ನಾವು ಇವೆರಡರಲ್ಲಿಯೂ ವ್ಯತ್ಯಾಸ ಗಮನಿಸಿದರೆ, ಒಂದರಲ್ಲಿ ನಾನು  ನನ್ನ  ಸಮಯವನ್ನು ನನಗಾಗಿ  ಕಳೆಯುತ್ತಿದ್ದೆ , ಇನ್ನೊಂದರಲ್ಲಿ ಎಲ್ಲರಿಗಿಂತ ತಾನು ಮುಂದೆ ಇರಬೇಕೆಂದೋ ಅಲ್ಲ ಗೆಳೆಯರ  ತೃಪ್ತಿಗೋಸ್ಕರನೋ ಸಮಯ ಕಳೆಯುತಿದ್ದೇನೆ. ಎರಡನೆಯದು ತಪ್ಪು ಎಂದು ಹೇಳುತ್ತಿಲ್ಲ. ಆದರೆ ಅವುಗಳೊಟ್ಟಿಗೆ ನಾನು ನನಗೋಸ್ಕರ ಏನು ಮಾಡುತ್ತಿದ್ದೇನೆ ಎಂಬುದು ಮುಖ್ಯ.ಇವುಗಳೆಲ್ಲದರ ಮಧ್ಯೆ ಒಂದು ಘಳಿಗೆ ಒಬ್ಬಳೇ ಇದ್ದು ಸುಮ್ಮನೆ ಕೂತು  ಹಾಡು ಕೇಳುತ್ತ, ಕತೆ ಪುಸ್ತಕ ಓದುತ್ತಿದ್ದರೆ ಏನೋ ತೃಪ್ತಿ ಕೊಡುತ್ತದೆ.

ನಮಗೋಸ್ಕರ ನಾವು ಏನು ಮಾಡುತ್ತಿಲ್ಲ ಎಂದ ಕೂಡಲೇ ಈಗ ಜಾಲ ತಾಣದಲ್ಲಿ ಏನು ಮಾಡಬಹುದೆಂದು ಹುಡುಕಲು ಶುರು ಮಾಡುತ್ತೇವೆ. ಜೀವನದ ಬಗ್ಗೆ ಪ್ರೇರೇಪಿಸುವಂತಹ, ಆಧ್ಯಾತ್ಮಿಕ ಜೀವನದಡೆ ಕೊಂಡೊಯ್ಯುವಂತಹ ವಿಡಿಯೋಗಳನ್ನು ನೋಡುತ್ತಾ ಕಾಲ ಕಳೆಯುತ್ತೇವೇ ಹೊರತು, ನಮಗೆ ಇಷ್ಟವಿದ್ದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ.

ಬೇರೆಯವರ ಖುಷಿಗೋಸ್ಕರ ಅಥವಾ ಅವರಿಂದ ತಾನು   ಮುಂದಿರಬೇಕೆಂದು ನಾವು ನಮ್ಮ ಎಲ್ಲಾ ಸಮಯವನ್ನು ಅದಕ್ಕಾಗಿ ಮುಡಿಪಾಗಿರಿಸುವುದು  ಜೀವನ ಪೂರ್ತಿ ಸಾಧ್ಯವೇ ಇಲ್ಲ. ಹಾಗೆಂದ ಮಾತ್ರಕ್ಕೆ ನಮ್ಮ ಜೀವನದ  ಗುರಿಯ ಹಿಂದೆ ಓಡುವುದು ಅಥವಾ ಗೆಳೆಯೊರಡನೆ ಕಾಲ ಕಳೆಯುವುದು  ಬಿಟ್ಟು ಬಿಡಬೇಕೆಂದೇನಿಲ್ಲ. ಇವುಗಳಿಂದ ದೂರ ಹೋಗಿ, ನಮ್ಮಷ್ಟಕ್ಕೆ  ನಾವು ಇರಬೇಕೆಂದುಕೊಂಡರು ಜೀವನ ಬೇಜಾರೆನಿಸಿಬಿಡುತ್ತದೆ. ಎಲ್ಲದರಲ್ಲೂ ಖುಷಿ ಕಾಣುತ್ತ, ಇನ್ನೊಬರಲ್ಲಿ  ನಮ್ಮ ಖುಷಿಯನ್ನು ಹುಡುಕುವುದಕ್ಕಿಂತ ನಮ್ಮಲ್ಲಿಯೇ  ಅದನ್ನು ಕಂಡರೆ ಜೀವನ ಎಂದು ಬೋರಿಂಗ್  ಎನಿಸುವುದಿಲ್ಲ.



Comments

Post a Comment

Popular posts from this blog

ಕ್ಷಮಿಸಿ ಟೀಚರ್ ...!

ಆವತ್ತು ಎಂದಿನಂತೆ ಕಾಲೇಜಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ಅದು ಯಾವತ್ತೂ ಮರೆಯದ ದಿನವಾಗುತ್ತದೆಂದು ಕನಸಲ್ಲೂ ಎಣಿಸಿರಲಿಲ್ಲ . ತಪ್ಪು ಎನ್ನುವುದಕ್ಕಿಂತ ಏನೋ ಪಾಪ ಮಾಡಿದ್ದೇನೆ ಎಂಬ ಭೀತಿ ಇಂದಿಗೂ ನನ್ನನ್ನು ಕಾಡುತ್ತಿದೆ. ನನ್ಮುಂದೆ ಬಸ್ಸೊಂದು ನಿಂತಿತ್ತು. ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟಿರುವುದೆಂದು ಬಸ್ಸು ನೋಡಿದಾಗ  ತಿಳಿಯಿತು. ನಾನೋ ಇದನೆಲ್ಲ ನೋಡುತಿದ್ದರು ನನ್ನ ಮನಸ್ಸು ಏನೋ ಬೇರೆ ಕಡೆಯೇ ತೇಲಿದಂತ ಅನುಭವ. ಆ ಬಸ್ಸಿನ ಕಿಟಕಿಯಿಂದ  ಸುಮಾರು ಇಪ್ಪತೆಂಟು ಮೂವತ್ತು ವರ್ಷದ ಹುಡುಗಿಯೊಬ್ಬಳು ನನ್ನ ಕಡೆ ನೋಡಿ ಕೈ ಬೀಸಿದಂತೆ ಆಯ್ತು. ಆದರೆ ಯಾರೆಂಬುದು ನನಗೆ ತಿಳಿಯಲೇ ಇಲ್ಲ. ನನ್ನ ನೋಡಿ ಕೈ ಬೀಸಿದಳೋ ಅಲ್ಲ ಪಕ್ಕದಲ್ಲಿರುವವರಿಗೆ ಸನ್ನೆ ಮಾಡುತಿದ್ದಳೊ ತಿಳಿಯಲಿಲ್ಲ.ಆಚೆ ಈಚೆ ನೋಡಿದರೆ ಯಾರು ಅವಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಮತ್ತೆ ಅವಳು ನನ್ನನ್ನೇ ನೋಡ್ತಿದಂತೆ ಅನಿಸಿತು. ಏನು ಯೋಚಿಸುತಿದ್ದೆನೋ ದೇವರಿಗೆ ಗೊತ್ತು. ನಾನು ಅವಳಿಗೆ ಪ್ರತಿಕ್ರಿಯಿಸಲೇ  ಇಲ್ಲ. ನಾನು ಅವಳಿಗೆ ಕೈ ಬೀಸುತಿದ್ದರೆ  ನನ್ನ ಗಂಟೇನು  ಹೋಗುತಿತ್ತು ಎಂದು ಇವತ್ತಿನವರೆಗೂ  ನನ್ನನು ನಾನು ಎಷ್ಟು ಬಾರಿ ಬೈದುಕೊಂಡಿದ್ದೇನೋ ಏನೋ. ಸ್ವಲ್ಪ ಹೊತ್ತಾದ ನಂತರ ಯಾರೋ ಬಸ್ಸಿನಿಂದ ಇಳಿದಂತಾಯ್ತು.  ಇಳಿದವಳನ್ನು ನೋಡಿ ಅವಾಕ್ಕಾದೆ . ನಾನು ಕಲಿತ ಶಾಲೆಯಲ್ಲೇ ನನ್ನ ಕಸಿನ್ ಓದುತ್ತಿದ್ದಳು . ಅವಳು ಬಸ್ಸಿನಿಂದ ಇಳಿದಂತೆ ಕಿಟಕಿ ಬದಿಯಲ್ಲಿದ್ದ

ಹೀಗೆ ಒಂದು ದಿನ ಕನಸಲ್ಲಿ ಕಂಡ ನನ್ನ ಕನಸಿನ ಗುಡಿಸಲು

ಕೃಪೆ : ಗೂಗಲ್ ಇಮೇಜ್ಸ್                       ಮಳೆ ಹನಿಗಳು  ಕಿಟಕಿ ಗಾಜಿಗೆ ಬೀಳುವ ಸದ್ದು ಕೇಳಿ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಅಲ್ಲೇ ಮೇಜಲ್ಲಿಟ್ಟ ಬುದ್ಧನ ಮುಗುಳ್ನಗೆ, ಪಕ್ಕದಲ್ಲಿರುವ ಕೃಷ್ಣಾರ್ಜುನರ  ರಥದ ಮಾದರಿ ಕಂಡರೆ  ಏನೋ ಮನಸ್ಸಿಗೆ ಮುದ ನೀಡುವುದು . ಚಿಕ್ಕಂದಿನಿಂದ ಅವೆರಡನ್ನು ಕೊಳ್ಳುವ ಆಸೆ. ಆದರೆ ಎಲ್ಲಿಯೂ ನನಗೆ ಬೇಕಂತಿರುವುದು ಸಿಕ್ಕಿರಲಿಲ್ಲ. ಕಳೆದ ವರ್ಷ ಉಡುಗೊರೆಯಾಗಿ ಪಡೆದಿದ್ದೆ.  ಪರದೆ ಸರಿಸಿ ಕಿಟಕಿ ಹೊರಗೆ ನೋಡಿದ್ರೆ ನಾ ನೆಟ್ಟ ಗುಲಾಬಿ  ಗಿಡದಲ್ಲಿದ್ದ ಒಂದು ಗುಲಾಬಿ ನನ್ನ ನೋಡಿ ನಕ್ಕಂತೆ ಕಾಣುತಿತ್ತು. ಹೂವೆಂದರೆ  ಪಂಚಪ್ರಾಣ. ಮಲ್ಲಿಗೆಯ ಸುವಾಸನೆ, ಗುಲಾಬಿಯ  ಸೌಂದರ್ಯ ಪದಗಳಲ್ಲಿ  ವರ್ಣಿಸಲು ಅಸಾಧ್ಯ.  ಮಳೆ ಬಿದ್ದಾಗ  ಆ ಮಣ್ಣಿನ ಸುವಾಸನೆ ನನ್ನನ್ನು ಮನೆಯಿಂದ  ಹೊರಬರಲು ಆಹ್ವಾನಿಸಿದಂತಾಯ್ತು. ಎದ್ದು ಛತ್ರಿ ತೆಗೊಂಡು ಹೊರಬಂದು ಹಾಗೆಯೇ ಬರಿಗಾಲಲ್ಲಿ ಅಂಗಳದಲ್ಲಿ ನಿಂತು, ನೀರಿನ ಗುಳ್ಳೆಗಳ ಸಾಲು ನೋಡುತ್ತಾ ನಿಂತು ಬಿಟ್ಟೆ. ಹಾಗೆ ದೃಷ್ಟಿ  ಬಿದ್ದದ್ದು ಹುಲ್ಲಿನ ಮೇಲಿರುವ ಆ ಕೆಂಪು ಕೀಟದ ಮೇಲೆ. ಕೇವಲ ಮಳೆಗಾಲದಲ್ಲಿ ಮಾತ್ರ ನಾ ಆ  ಕೀಟವನ್ನು ಕಂಡಿದ್ದು. ಹೆಸರು ಇನ್ನು ಗೊತ್ತಿಲ್ಲ ಆದ್ರೆ ಮಳೆ ಹನಿಗಳೊಂದಿಗೆ ಅವುಗಳು ಆಕಾಶದಿಂದ ಬೀಳುತ್ತವೆ ಎಂದು ಸಣ್ಣದಿರುವಾಗ ಯಾರೋ ಹೇಳಿದ ನೆನಪು. ಬಲಕ್ಕೆ ತಿರುಗಿದರೆ ನನ್ನ ತರಕಾರಿ ತೋಟ. ಬಾಳೆ, ತೆಂಗು, ಮಾವಿನ ಮರಗಳು ಮಳೆಗೆ ಮೈ ಒಡ್ಡಿ ನಿಂ

ಸ್ಪೂರ್ತಿ

ಮುಂಜಾನೆ ಎದ್ದು ಸ್ನಾನ ಮಾಡಿ ಬಂದು ಮೊಬೈಲ್ ನೋಡಿದರೆ ಆರು ಮಿಸ್ಸ್ಡ್ ಕಾಲ್ಸ್ ಇದ್ವು. ಕರೆ ಮಾಡಿದೆ. ಆಚೆಯಿಂದ "ಅಕ್ಕ ಇವತ್ತು ಏಕ್ಸಾಮ್ ಬರೀಲೀಕ್ಕೆ ಬರ್ತಿದ್ದೀರಿ ತಾನೇ ?" ಎಂದು  ಹುಡುಗಿ ಗಾಬರಿ ಸ್ವರದಲ್ಲಿ ಕೇಳಿದಳು. "ಹೌದು ! ಹೊರಡ್ತಿದ್ದೀನಿ." ಎಂದು ಸಮಾಧಾನಿಸಿ ಫೋನ್ ಪಕ್ಕಕ್ಕಿಟ್ಟು, ಬೇಗನೆ ತಯಾರಾಗಿ ರೂಮಿನಿಂದ ಹೊರಡಿದೆ. ಅದು ೪೫ ನಿಮಿಷಗಳ ಪ್ರಯಾಣ. ಅಷ್ಟರಲ್ಲಿ ಮೂರ್ನಾಲ್ಕು ಸಲ ನಾನು ಎಲ್ಲಿದ್ದೀನಿ ಎಂದು ವಿಚಾರಿಸಲು ಕರೆ ಮಾಡಿದ್ದಳು. ೮:೪೫ ಗೆ ತಲುಪಬೇಕಿತ್ತು. ೮:೩೦ ಗೆ ನೇ ತಲುಪಿದ್ದೆ. ಕಾಲೇಜು ಹೊರಗೆ ತನ್ನ ಗೆಳತಿಯೊಟ್ಟಿಗೆ ಕಾದು ನಿಂತಿದ್ದಳು.  "ಹಾಯ್, ಸ್ಪೂರ್ತಿ ತಾನೇ ? " ಅಂದೆ. "ಹೌದಕ್ಕಾ, ಬಂದ್ರಾ. ಹೇಗೆ ಪರಿಚಯವಾಯ್ತು . ನಾವು ಎಂದೂ ಭೇಟಿಯಾಗಿಲ್ಲ ಅಲ್ವಾ" ಎಂದಾಗ, ಅಲ್ಲಿರುವ ಜನರಿಗಿಂತ ಭಿನ್ನವಾಗಿ ಅವಳು ಇದ್ದುದ್ದರಿಂದ ಪರಿಚಯವಾಯ್ತು ಎಂದು ಹೇಳಲು ಮನಸ್ಸಾಗಲಿಲ್ಲ. ಸುಮ್ನೆ ಅವಳ ಬೆನ್ನು ತಟ್ಟಿ ನಕ್ಕು ಬಿಟ್ಟೆ. "ಸಾರೀ ಅಕ್ಕ, ತುಂಬಾ ಸಲ ಕಾಲ್ ಮಾಡಿದೆ. ಮೊನ್ನೆ ನನ್ನ ಗೆಳತಿಗೆ ಒಬ್ರು ಏಕ್ಸಾಮ್ ಬರೀಲಿಕ್ಕೆ ಬರ್ತೇನೆ ಹೇಳಿ ಬಂದಿರ್ಲಿಲ್ಲ. ಅದ್ಕೆ ಗಾಬರಿಯಾಗಿದ್ದೆ " ಅಂದ್ಲು. ಕಾಲೇಜು ಒಳಗೆ ಹೋಗಿ ರೂಮ್ ಹುಡುಕಿ ಅಲ್ಲಿ ಕೂತು ಮಾತಾಡಲು ಶುರು ಮಾಡಿದ್ವಿ. ಸ್ವಲ್ಪ ಹೊತ್ತಾದ ನಂತರ ಸ್ಪೂರ್ತಿ ಹಾಗು ಅವಳ ಗೆಳತಿಯಂತೆ ಏಳೆಂಟು ಜನ ತಮ್ಮ ಬ