Skip to main content

Posts

Showing posts from 2018
ಬೇಸಿಗೆ ರಜೆ ಬಂತೆಂದರೆ ಸಾಕು ಎಂದು ಎಲ್ಲರೂ ಕಾಯುತಿದ್ದರೆ, ನಾನು ರಜೆ ಸಿಕ್ಕರೆ ಶಾಲೆ ಶುರುವಾಗಲು ಕಾಯುತಿದ್ದೆ. ಶಾಲೆಗೆ ಹೋದರೆ ಒಂದು ಘಂಟೆಯಾದ್ರೂ ಆಡಲು ಅವಕಾಶ ಇತ್ತು. ಈಗ ದೊಡ್ಡವಳಾದ್ರಿಂದ ಮನೆಯಲ್ಲಿ ಕುಣಿದು ಕುಪ್ಪಳಿಸಿ ಆಡಲು ಅವಕಾಶವಿರಲಿಲ್ಲ. ಹುಡುಗಿ ದೊಡ್ಡವಳಾದ ಮೇಲು , ಹೊರಗೆ ಹೋಗಿ ಆಡಿದ್ರೆ ಊರಿನವರು ಏನು ಹೇಳಿಯಾರು ಎಂಬ ಭಯ.  ಬೆಳಿಗ್ಗೆಯಾದ್ರೆ ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಿಯಾದ್ರು ಸಮಯ ಹೋಗುತಿತ್ತು. ಮಧ್ಯಾಹ್ನ ಅಮ್ಮ ಮಲಗಿದ್ರೆ ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ಮನೆಯಲ್ಲಿ ಕೂರಲು ಬೇಜಾರು. ಇದ್ದ ಕಥೆ ಪುಸ್ತಕಗಳನ್ನೆಲ್ಲ  ಆಗಲೇ ಮೂರ್ನಾಲ್ಕು ಸಲ ಓದಿ ಆಗಿರುತ್ತಿತ್ತು. ಏನು ಮಾಡಬೇಕೆಂದು ತೋಚದಿದ್ದಾಗ , ಕಾಣಿಸಿದ್ದು ವಿವಾಹದ ಆಮಂತ್ರಣ ಪತ್ರಿಕೆಗಳು ಹಾಗು ಹಳೆ ಪುಸ್ತಕಗಳ ರಟ್ಟುಗಳು. ವಿವಿಧ ಶೈಲಿಗಳ ಆಮಂತ್ರಣ ಪತ್ರಿಕೆಗಳನ್ನು ಒಟ್ಟು ಹಾಕಿ, ಅವುಗಳನ್ನು ಕತ್ತರಿಸುತ್ತಾ ಏನಾದ್ರು ಒಂದು ಮಾಡಿ ಸಮಯ ಕಳೆಯುತ್ತಿದ್ದೆ. ಅಮ್ಮ ನಿದ್ದೆ ಯಿಂದ ಎದ್ದ ಕೂಡಲೇ, ಇನ್ನು ಮದುವೆ ಸಮಾರಂಭ ಮುಗಿಯದ ಪತ್ರಿಕೆಗಳನ್ನು ಹರಿದಿದಕ್ಕೆ ಬೈಗುಳ ತಿನ್ನುವುದು ರೂಢಿಯಾಗಿತ್ತು. ಹೀಗೆ ಸಣ್ಣ ಪುಟ್ಟ ಕರಕೌಶಲಗಳನ್ನು ಮಾಡುತ್ತಾ, ಕತೆ ಪುಸ್ತಕ ಓದುತ್ತ, ಹಳೆ ಬುಕ್ಕುಗಳ ರಟ್ಟು ಹಿಡ್ಕೊಂಡು ಕಂಪ್ಯೂಟರ್ ಮಾಡುತ್ತಾ, ಹಿಂದಿನ ತರಗತಿಯ ಪುಸ್ತಕಗಳಲ್ಲಿ ಇದ್ದ ಚಿತ್ರಗಳನ್ನು ಕತ್ತರಿಸಿ ಒಂದು ಪುಸ್ತಕದಲ್ಲಿ ಅಂಟಿಸುತ್ತಾ  ನನಗೆ ಮ

ಎಮರ್ಜೆನ್ಸಿ ಕಾಂಟ್ಯಾಕ್ಟ್ಸ್

ಮಹಿಳಾ ದಿನಾಚರಣೆ !  ವಾಟ್ಸಪ್ಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಎಲ್ಲಿ ನೋಡಿದರು ಹೆಣ್ಣಿನ ಜೀವನ, ಅವಳ  ತ್ಯಾಗ, ತಾಳ್ಮೆ, ನೋವಿನ ಬಗ್ಗೆಯೇ ತುಂಬಿ ತುಳುಕುತ್ತಿದೆ. ವಿಶ್ ಮಾಡಿದವರಿಗೆ ರಿಪ್ಲೈ ಮಾಡಿ, ಮಹಿಳಾ ದಿನಾಚರಣೆ ಆಚರಿಸುವುದು ಸರಿಯೋ ತಪ್ಪೋ ಎಂದು ಮನದಲ್ಲೇ ಚರ್ಚಿಸುತ್ತ ಆಫೀಸಿಗೆಂದು ಹೊರಟೆ. ಆಫೀಸ್ ಗೇಟ್ ಅಲ್ಲಿ ಸೆಕ್ಯೂರಿಟಿ ಗಾರ್ಡ್ಸ್ ಮುಗುಳ್ನಗುತ್ತ "ಹ್ಯಾಪಿ ವುಮೆನ್ಸ್ ಡೇ" ಎಂದು ವಿಶ್ ಮಾಡಿ ಒಂದು ಬ್ಯಾಡ್ಜ್ ಕೈಗಿತ್ತರು. ಒಂದು ಕಡೆಯಲ್ಲಿ ಹೆಣ್ಣಿನ ಚಿತ್ರವಿದ್ದರೆ  ಇನ್ನೊಂದು ಕಡೆಯಲ್ಲಿ "ಎಮರ್ಜೆನ್ಸಿ ಕಾಂಟ್ಯಾಕ್ಟ್ಸ್ " ಇದ್ವು. ಅದು ಮಹಿಳಾ ದಿನಾಚರಣೆಗೆ ಸಿಕ್ಕಿದ ಗಿಫ್ಟ್ ಆಗಿತ್ತು. ಅಯ್ಯೋ ಇಷ್ಟೇನಾ ಎಂದುಕೊಂಡೆ, ಆದರು ಎಲ್ಲೊ ಮನದಲ್ಲಿ ಇದೆ ಇಂದಿನ ದಿನಗಳಲ್ಲಿ ಬಲು ಅವಶ್ಯವಾದದು ಎಂದೆನಿಸಿತು. ಒಂದು ಕೋಣೆಯಲ್ಲಿ ಒಬ್ಬಳು ಇರಲು ಹೆದರುತ್ತಿದ್ದವಳು ನಾನು. ಎಲ್ಲಿ ಕರೆಂಟ್ ಹೋಗಿ ಕತ್ತಲೆ ಯಲ್ಲಿ ಭೂತ ಕಾಣಿಸುವುದೋ ಎಂಬ ಭಯ. ಇನ್ನೊಂದು ಕೋಣೆ ಯ ದೀಪ ಆರಿಸಿ ಬಾ ಎಂದು ಅಮ್ಮ ಹೇಳಿದರೆ ನನ್ನಿಂದ ಆಗದು ಎನ್ನುತ್ತಿದ್ದೆ. ಆದರೆ ಇಂದು ಜನರಿಂದ ತುಂಬಿ ತುಳುಕುತ್ತಿರುವ ಜಾಗದಲ್ಲಿದ್ದರು ಹಗಲಲ್ಲೂ ಹೆದರಿಕೆ. ಭೂತದಲ್ಲ ಮನುಷ್ಯರದು. ಮುಂಚೆ ರಸ್ತೆ ದಾಟುವಾಗ ಜಾಗೃತೆ ಎಂದು ಹೇಳಿ ಕಳುಹಿಸುತ್ತಿದ್ದರು ಅಮ್ಮ , ಇಂದು ರೋಡ್ ದಾಟಿ ಅಪಾರ್ಟ್ಮೆಂಟ್  ಗೇಟ್ ಒಳಗಿದ್ದೇನೆ ಎಂದರು ಅಮ್ಮ, ಮನೆ ತಲುಪಿದ ಕೂ