Skip to main content

Posts

Showing posts from January, 2017

ಜೀವನ ಎಂಬ ಈ ಪ್ರಯಾಣದಲ್ಲಿ ಸಾಗುತ್ತಿದ್ದಂತೆ ...!

ದೀಪಾವಳಿಯ ರಜೆ ಮುಗಿಯಿತು, ಮನಸ್ಸು ಒಪ್ಪದಿದ್ದರು ಮನೆಯಿಂದ ಹೊರಡಲೇ ಬೇಕು. ಇತ್ತೀಚೆಗಷ್ಟೇ ಕಾಲೇಜು ಮುಗಿಸಿ ಕೆಲಸದ ನಿಮಿತ್ತ ಮೈಸೂರಲ್ಲಿ ಟ್ರೈನಿಂಗ್ ಮುಗಿಸಿಕೊಂಡು  ಹೈದೆರಾಬಾದಿಗೆ ಟ್ರಾನ್ಸ್ಫರ್ ಆಗಿತ್ತು. ಕಾಲೇಜಲ್ಲಿ ಇರಬೇಕಿದ್ದರೆ ಮನೆಯಿಂದ ದೂರ ಇರಬೇಕು, ಬ್ಯಾಚುಲರ್ ಲೈಫ್ ಅಂದರೆ ಏನೆಂಬುದು ಅನುಭವಿಸಬೇಕೆಂಬ ಕಾತುರ. ಆದರೆ  ಈಗ ಮನೆಗೆ ಹೊರಡಲು ತುದಿಗಾಲಲ್ಲಿ ನಿಲ್ಲುತ್ತೇವೆ, ರಜೆ ಮುಗಿಸಿಕೊಂಡು ಮನೆಯಿಂದ ಹಿಂದೆ ಹೊರಡಬೇಕಿದ್ದರೆ  ಮನಸ್ಸು ಭಾರವಾಗುತ್ತದೆ. ಮನೆಯಿಂದ ಸುಮಾರು ಮೂರು ಗಂಟೆಗೆ ಬಸ್ಸು ಹತ್ತಿದ್ದೆ. ಪ್ರಯಾಣಿಸುವಾಗ ಕಿಟಕಿ ಬದಿಯಲ್ಲಿ ಕೂರುವುದಂದ್ರೆ  ಅದೇನೋ  ನನಗೆ ಚಿಕ್ಕಂದಿನಿಂದ ಇಷ್ಟವಾಗಿತ್ತು. ಶಾಲೆಗೆ ಬಸ್ಸಲ್ಲಿ ಹೊರಡಬೇಕಿದ್ದರೆ ಕಿಟಕಿ ಬದಿಯಲ್ಲಿ  ಕೂರಲು ಅಣ್ಣನೊಡನೆ ಜಗಳವಾಡುವುದು ರೂಢಿಯಾಗಿತ್ತು. ನನ್ನ ಸೀಟ್ ಹುಡುಕುತ್ತ ಹೋಗಿ ನೋಡಿದರೆ ಅಲ್ಲಿ ಒಬ್ಬಳು, ಕಿವಿಗೆ  ಇಯರ್ ಫೋನ್  ಸಿಕ್ಕಿಸಿಕೊಂಡು ಅವಳ  ಲೋಕದಲ್ಲೇ ಮಗ್ನಳಾಗಿ ಕೂತಿದ್ದಳು. ಕಿಟಿಕಿ ಬದಿ ಕೂರಬೇಕೆಂದರೆ ಈಗಲೂ ನನ್ನೊಳಗಿರುವ ಆ ಹಠಾತ್ತಾದ ಪುಟ್ಟ ಹುಡುಗಿ ಎದ್ದು ಬಿಡುತ್ತಾಳೆ. ಅಲ್ಲಿ ಕೂತಿದ್ದವಳು ನನ್ನನ್ನು  ನೋಡಿ ಪಕ್ಕಕ್ಕೆ ಸರಿದಳು. ನನ್ನೊಳಗಿರುವ  ಆ  ಪುಟ್ಟ  ಹುಡುಗಿ  ನಲಿಯುತಿದ್ದಳು  ಖುಷಿಯಿಂದ. ಬಸ್ ಹೊತ್ತಿಗಿಂತ ಬೇಗನೆ ಬಂದಿದ್ದರಿಂದ ಅಲ್ಲೇ ನಿಂತಿತ್ತು . ಬಸ್ ಹೊರಡಬೇಕಿದ್ದರೆ ನನ್ ಕಾಲೇಜ್ ಬ್ಯಾಚ್ ಮೇಟ್ ಒಬ್ಬ