ಮಹಿಳಾ ದಿನಾಚರಣೆ ! ವಾಟ್ಸಪ್ಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಎಲ್ಲಿ ನೋಡಿದರು ಹೆಣ್ಣಿನ ಜೀವನ, ಅವಳ ತ್ಯಾಗ, ತಾಳ್ಮೆ, ನೋವಿನ ಬಗ್ಗೆಯೇ ತುಂಬಿ ತುಳುಕುತ್ತಿದೆ. ವಿಶ್ ಮಾಡಿದವರಿಗೆ ರಿಪ್ಲೈ ಮಾಡಿ, ಮಹಿಳಾ ದಿನಾಚರಣೆ ಆಚರಿಸುವುದು ಸರಿಯೋ ತಪ್ಪೋ ಎಂದು ಮನದಲ್ಲೇ ಚರ್ಚಿಸುತ್ತ ಆಫೀಸಿಗೆಂದು ಹೊರಟೆ. ಆಫೀಸ್ ಗೇಟ್ ಅಲ್ಲಿ ಸೆಕ್ಯೂರಿಟಿ ಗಾರ್ಡ್ಸ್ ಮುಗುಳ್ನಗುತ್ತ "ಹ್ಯಾಪಿ ವುಮೆನ್ಸ್ ಡೇ" ಎಂದು ವಿಶ್ ಮಾಡಿ ಒಂದು ಬ್ಯಾಡ್ಜ್ ಕೈಗಿತ್ತರು. ಒಂದು ಕಡೆಯಲ್ಲಿ ಹೆಣ್ಣಿನ ಚಿತ್ರವಿದ್ದರೆ ಇನ್ನೊಂದು ಕಡೆಯಲ್ಲಿ "ಎಮರ್ಜೆನ್ಸಿ ಕಾಂಟ್ಯಾಕ್ಟ್ಸ್ " ಇದ್ವು. ಅದು ಮಹಿಳಾ ದಿನಾಚರಣೆಗೆ ಸಿಕ್ಕಿದ ಗಿಫ್ಟ್ ಆಗಿತ್ತು. ಅಯ್ಯೋ ಇಷ್ಟೇನಾ ಎಂದುಕೊಂಡೆ, ಆದರು ಎಲ್ಲೊ ಮನದಲ್ಲಿ ಇದೆ ಇಂದಿನ ದಿನಗಳಲ್ಲಿ ಬಲು ಅವಶ್ಯವಾದದು ಎಂದೆನಿಸಿತು. ಒಂದು ಕೋಣೆಯಲ್ಲಿ ಒಬ್ಬಳು ಇರಲು ಹೆದರುತ್ತಿದ್ದವಳು ನಾನು. ಎಲ್ಲಿ ಕರೆಂಟ್ ಹೋಗಿ ಕತ್ತಲೆ ಯಲ್ಲಿ ಭೂತ ಕಾಣಿಸುವುದೋ ಎಂಬ ಭಯ. ಇನ್ನೊಂದು ಕೋಣೆ ಯ ದೀಪ ಆರಿಸಿ ಬಾ ಎಂದು ಅಮ್ಮ ಹೇಳಿದರೆ ನನ್ನಿಂದ ಆಗದು ಎನ್ನುತ್ತಿದ್ದೆ. ಆದರೆ ಇಂದು ಜನರಿಂದ ತುಂಬಿ ತುಳುಕುತ್ತಿರುವ ಜಾಗದಲ್ಲಿದ್ದರು ಹಗಲಲ್ಲೂ ಹೆದರಿಕೆ. ಭೂತದಲ್ಲ ಮನುಷ್ಯರದು. ಮುಂಚೆ ರಸ್ತೆ ದಾಟುವಾಗ ಜಾಗೃತೆ ಎಂದು ಹೇಳಿ ಕಳುಹಿಸುತ್ತಿದ್ದರು ಅಮ್ಮ , ಇಂದು ರೋಡ್ ದಾಟಿ ಅಪಾರ್ಟ್ಮೆಂಟ್ ಗೇಟ್ ಒಳಗಿದ್ದೇನೆ ಎಂದರು ಅಮ್ಮ, ಮನೆ ತಲುಪಿದ ಕೂ...
Feelings when written are better delivered than spoken.