ಅದೊಂದು ಸಮಾರಂಭದಲ್ಲಿ ನನ್ನ ಸುತ್ತಮುತ್ತ ಕೆಲವು ಹೆಂಗಸರು ಕೂತು ಮಾತಾಡುತ್ತಿದ್ದರು. ಹೆಂಗಸು ೧ : (ಪಕ್ಕದಲ್ಲಿ ಕೂತಿದ್ದ ಹುಡುಗಿಯನ್ನ ) "ಏನಮ್ಮ ಏನ್ ಕಲಿತಿದ್ದೀಯಾ ?" ಹೆಂಗಸು ೨ : "ಅವಳನ್ನ ಇಂಜಿನಿಯರಿಂಗ್ ಗೆ ಸೇರಿಸಿದ್ದೀವಿ. ಇನ್ನು ಮುಂದಿನ ವಾರ ಕ್ಲಾಸ್ಸ್ ಸ್ಟಾರ್ಟ್ ಆಗುತ್ತೆ." ಮಗಳಿಗೆ ಕೇಳಿದ ಪ್ರಶ್ನೆಗೆ ತಾಯಿ ಉತ್ತರಿಸಿದರು. ಮಗಳು ತನ್ನ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಳು. ತನ್ನ ಸುತ್ತಮುತ್ತ ಇರುವ ಜನರನ್ನ ಮಾತಾಡಿಸುವದಕ್ಕಿಂತ ಪೊಕೀಮೋನ್ ಹಿಡಿಯುದರಲ್ಲಿ ಬ್ಯುಸಿ ಆಗಿದ್ದಳು. ಹೆಂಗಸು ೧ : "ಒಹ್! ಹಾಗೇನು .ಅಂದ್ರೆ ಪಿಯುಸಿ ಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿರ್ಬೇಕಲ್ಲ? ಒಳ್ಳೇದು ." ಹೆಂಗಸು ೨ : "ಇಲ್ಲ ಕಣ್ರೀ . ಫೇಲ್ ಆಗಿದ್ರು ಫೇಲ್ ಆದ್ಲು ಎಂದು ಹೇಳೋಕ್ಕೆ ನಾನು ಸಂಕೋಚ ಪಡ್ತಿರ್ಲಿಲ್ಲ. ಅಷ್ಟು ಕಮ್ಮಿ ಮಾರ್ಕ್ಸ್ ತೆಗ್ದಿದ್ದಾಳೆ ನೋಡಿ. ನಮಗೆ ಅವಳು ಇಂಜಿನಿಯರಿಂಗ್ ಮಾಡಬೇಕೆಂಬುದು ಆಸೆ. ಬಿ ಎಸ್ಸಿ ಎಲ್ಲ ಕಲಿತರೆ ಏನು ಸಿಗ್ತದೆ ಹೇಳಿ. ಹಾಗೆ ಮಂಗಳೂರಲ್ಲೇ ಒಂದು ಕಾಲೇಜು ಗೆ ಮ್ಯಾನೇಜ್ಮೆಂಟ್ ಸೀಟ್ ಅಲ್ಲಿ ಆರ್ಕಿಟೆಕ್ಚರ್ ಗೆ ಸೇರಿಸಿದ್ದೀವಿ. ಈ ಕೋರ್ಸ್ ಗೆ ಸೇರಿದ್ರೆ ೨ ಸಲ ಟೂರ್ ಗೆ ಹೋಗಬಹುದು ಅಂತ ಅವಳ ಗೆಳೆಯರು ಹೇಳಿದ್ದಾರಂತೆ. " ಹೆಂಗಸು ೧: "ಅದಕ್ಕೇನಂತೆ ಬಿಡಿ. ಇರುವುದು ಒಬ್ಬಳು ಮಗಳು , ಕಲೀಲಿ. " ಹೆಂಗಸು ೨: "ಏನೋ ಅವ...
Feelings when written are better delivered than spoken.